Advertisement

ಹೃದಯ ಸಂಬಂಧಿ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ಅನಿವಾರ್ಯ: ಸಚಿವ ಕೆ.ಜೆ. ಜಾರ್ಜ್

06:15 PM Jul 08, 2023 | Team Udayavani |

ಬೆಂಗಳೂರು: ಹೃದಯ ಸಂಬಂಧಿ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ಅನಿವಾರ್ಯ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರತಿಪಾದಿಸಿದ್ದು, ಈ ತುರ್ತು ಚಿಕಿತ್ಸೆಗಳು ಕೈಗೆಟುಕುವ ದರಗಳಲ್ಲಿ ದೊರಕಬೇಕು ಎಂದರು.

Advertisement

ನಗರದ ಕಮ್ಮನಹಳ್ಳಿಯಲ್ಲಿರುವ ಜಿಯಾನ್ ಇನ್ಸಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕಾತ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.

ಕಮ್ಮನಹಳ್ಳಿ ವ್ಯಾಪ್ತಿಯಲ್ಲಿ ಜಿಯಾನ್ ಆಸ್ಪತ್ರೆ ಹಲವು ವರ್ಷಗಳಿಂದ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸಚಿವರು, ಅತ್ಯಾಧುನಿಕ ಕಾತ್ ಲ್ಯಾಬ್‍ನೊಂದಿಗೆ ಆಸ್ಪತ್ರೆ ಸಜ್ಜುಗೊಂಡಿದ್ದು, ಇನ್ನಷ್ಟು ಮಂದಿಗೆ ಇದರಿಂದ ಸಹಾಯವಾಗಲಿದೆ ಎಂದರು.

ಇದೇ ವೇಳೆ ಮಾತನಾಡಿದ ಆಸ್ಪತ್ರೆ ನಿರ್ದೇಶಕ ರಾಧಾಕೃಷ್ಣ ಟಿ.ಪಿ, ಕಮ್ಮನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಪೂರೇಟ್ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದರೆ ಜಿಯಾನ್ ಆಸ್ಪತ್ರೆ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಕೈಗೆಟುಕುವ ದರಗಳಲ್ಲಿ ಚಿಕಿತ್ಸೆ ನೀಡುತ್ತಿದೆ ಎಂದರು.

ಕಾತ್ ಲ್ಯಾಬ್ ಉದ್ಘಾಟನೆಯಿಂದ ಆಸ್ಪತ್ರೆಯ ಒಂದೇ ಸೂರಿನಡಿ ಇಸಿಜಿ, ಎಕೋ, ಟಿಎಂಟಿ ಸೇರಿದಂತೆ ಹಲವು ಹೃದಯ ಸಂಬಂಧಿ ತುರ್ತು ಚಿಕಿತ್ಸೆಗೆ ಸಹಕಾರಿಯಾಗಿದೆ ಎಂದರು.

Advertisement

ಬದಲಾಗುತ್ತಿರುವ ಜೀವನ ಶೈಲಿ ಮತ್ತು ವಾಕಿಂಗ್ ಮಾಡದ ಪರಿಣಾಮ ಇಂದು ಲೈಫ್ ಸ್ಟೈಲ್ ರೋಗಗಳು ಎನ್ನಲಾಗುತ್ತಿರುವ ಬಿಪಿ, ಶುಗರ್ ಸಾಮಾನ್ಯವಾಗುತ್ತಿದೆ. ಅದರಲ್ಲೂ ಭಾರತದಲ್ಲಿ 42ರಿಂದ 50ರ ವಯೋಮಾನದವರಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ ಎಂದ ಹೃದ್ರೋಗ ತಜ್ಞ ಡಾ. ರಂಗರಾಜ್, ಹೃದಯ ಸಂಬಂಧಿ ಸಮಸ್ಯೆ ಎದುರಾಗಾದ ತುರ್ತು ಚಿಕಿತ್ಸೆ ಮೂಲಕ ರೋಗಿಯನ್ನು ಕಾಪಾಡಬಹುದು. ಈ ನಿಟ್ಟಿನಲ್ಲಿ ತಮ್ಮ ಜಿಯಾನ್ ಆಸ್ಪತ್ರೆ ಅತ್ಯಾಧುನಿಕ ಕಾತ್ ಲ್ಯಾಬ್ ವ್ಯವಸ್ಥೆ ಹೊಂದಿರುವುದು ಸಂತಸ ತಂದಿದೆ ಎಂದರು.

ಸಮಾರಂಭದಲ್ಲಿ ಜಿಯಾನ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಆಶಾ ಜಯರಾಂ ಸೇರಿದಂತೆ ಹಿರಿಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಚಿತ್ರ: ಶನಿವಾರ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ಜಿಯಾನ್ ಆಸ್ಪತ್ರೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಅತ್ಯಾಧುನಿಕ ಕಾತ್ ಲಾಬ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಯಾನ್ ಇನ್ಸ್ ಟಿಟ್ಯೂಟ್ ಆಫ್ ಕಾರ್ಡಿಕ್ ಸೈನ್ಸ್ ಸಂಸ್ಥೆ ನಿರ್ದೆಶಕ ರಾಧಾಕೃಷ್ಣ, ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಆಶಾ ಜಯರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next