Advertisement

ಭಾರತದ ಕೋವಿಡ್ ಸಂಕಷ್ಟಕ್ಕೆ ಗ್ಲೋಬಲ್ ಸೆಲೆಬ್ರಿಟಿಗಳ ಕಳವಳ

08:02 PM May 04, 2021 | Team Udayavani |

ಲಂಡನ್ : ಕೋವಿಡ್ 19 ರೂಪಾಂತರಿ ಅಲೆ ಇಡೀ ಭಾರತವನ್ನು ಮತ್ತೆ ನಲುಗಿಸಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ದೇಶದಾದ್ಯಂತ ಕೋವಿಡ್ ಸೊಂಕಿನ ವೇಗ ಮತ್ತಷ್ಟು ಜಾಸ್ತಿಯಾಗಿದ್ದು, ಊಹಿಸಿಕೊಳ್ಳಲಾರದಷ್ಟು ಸಾವು ನೋವು ದೇಶದಲ್ಲಿಆಗುತ್ತಿದೆ.

Advertisement

ಭಾರತ ಅನುಭವಿಸುತ್ತಿರುವ ಕೋವಿಡ್ ಸಂಕಷ್ಟಕ್ಕೆ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ. ಈಗಾಗಲೇ ಭಾರತದ ಸಹಾಯಕ್ಕೆ ಕೆಲವು ದೇಶಗಳು ಮುಂದೆ ಬಂದಿವೆಯಾದರೂ ಸದ್ಯ ಇರುವ ವೈದ್ಯಕೀಯ ಸೌಲಭ್ಯಗಳು ಭಾರತದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅಕ್ಷರಶಃ ಸತ್ಯ.

ಇನ್ನು, ಭಾರತದ ಕೋವಿಡ್ ಸಂಕಷ್ಟಕ್ಕೆ ಧ್ವನಿಯಾಗುವಂತೆ ಅನೇಕ ಜಾಗತಿಕ ಮಟ್ಟದ ಸೆಲೆಬ್ರಟಿಗಳು ಕೂಡ ಮುಂದೆ ಬಂದಿದ್ದಾರೆ.

ಕೋವಿಡ್ -19 ಎರಡನೇ ಅಲೆಯ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಭಾರತಕ್ಕೆ ಸಹಾಯ ಮಾಡಲು ಮಾಜಿ ವಿಶ್ವ ಸುಂದರಿ, ಬಾಲಿವುಡ್ ಮೋಹಕ ನಟಿ ಪ್ರಿಯಾಂಕಾ ಚೋಪ್ರಾ ನಿಧಿಸಂಗ್ರಹವನ್ನು ಪ್ರಾರಂಭಿಸಿದ್ದಾರೆ. ಜಾಗತಿಕ ತಾರೆ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದು, ನಿರಂತರವಾಗಿ, ಅವರು ಕೋವಿಡ್ ಪರಿಸ್ಥಿತಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ತಮ್ಮ ಅಧಿಕೃತ  ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಚೋಪ್ರಾ, ಅಗತ್ಯವಿರುವವರಿಗೆ ಸಹಾಯ ಮಾಡಲು ತಮ್ಮ ಸಾಮರ್ಥ್ಯದಲ್ಲಿ ದೇಣಿಗೆ ನೀಡುವಂತೆ ಕೋರಿಕೊಂಡಿದ್ದಾರೆ.

Advertisement

“ನಾವು ಯಾಕೆ ಕಾಳಜಿ ವಹಿಸಬೇಕು ? ಏಕೆ ತುಂಬಾ ತುರ್ತು ?  ಎಂಬಲ್ಲದರ ಬಗ್ಗೆ ನನ್ನ ಸ್ನೇಹಿತರಿಂದ ಮಾಹಿತಿ  ಪಡೆಯುತ್ತಿದ್ದೇನೆ. ಭಾರತದಲ್ಲಿ ಕೋವಿಡ್ ಎರಡನೇ ಅಲೇ ಭೀಕರವಾಗಿದೆ. ಆಕ್ಸಿಜನ್ ಕೊರತೆ, ಆಸ್ಪತ್ರೆಗಳಲ್ಲಿ ಐಸಿಯು ಗಳಿಲ್ಲ, ಬೆಡ್ ಗಳಿಲ್ಲ. ಕೋವಿಡ್ ಸಂಕಷ್ಟದಿಂದ ನನ್ನ ದೇಶ ನಲುಗುತ್ತಿದೆ. ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.

ಓದಿ : ಕೋವಿಡ್ ಕಾಟ: ಈ ಬಾರಿಯ ಐಪಿಎಲ್ ಕೂಟ ಅಮಾನತು!

ಕ್ಯಾಮಿಲಾ ಕ್ಯಾಬೆಲ್ಲೊ ಮತ್ತು ಶಾನ್ ಮೆಂಡೆಸ್

ಕ್ಯಾಮಿಲಾ ಕ್ಯಾಬೆಲ್ಲೊ ಮತ್ತು ಗಾಯಕ ಗೆಳೆಯ ಶಾನ್ ಮೆಂಡಿಸ್ ಕೂಡ ಭಾರತದ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಸಹಾಯ ಮಾಡಬೇಕಾಗಿದೆ.

‘ಸೆನೋರಿಟಾ’ ಗಾಯಕಿ ಕ್ಯಾಮಿಲಾ ಕ್ಯಾಬೆಲ್ಲೊ  ತನ್ನ ಅಭಿಮಾನಿಗಳಿಗಾಗಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.  ಭಾರತವು ಕೋವಿಡ್ ಎರಡನೇ ಅಲೆಯನ್ನು ಎದುರಿಸುತ್ತಿದೆ. 18 ದಶಲಕ್ಷ ಪ್ರಕರಣಗಳು ವರದಿಯಾಗಿವೆ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಎಲ್ಲರನ್ನೂ ನೋಡಿಕೊಳ್ಳಲು ಸಾಕಷ್ಟು ಸಂಪನ್ಮೂಲಗಳಿಲ್ಲ. ಜೀವ ಉಳಿಸಲು ಅವರಿಗೆ ರಕ್ಷಣಾ ಸಾಧನಗಳು, ಆಮ್ಲಜನಕಗಳ ಕೊರತೆ ಎದುರಾಗಿದೆ. ಭಾರತದ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.

ಓದಿ : ಅಮೆರಿಕಾದ ಕೋವಿಡ್ ನೆರವು ಬುಧವಾರದವರೆಗೆ ವಿಳಂಬ

ಕೇಟಿ ಪೆರ್ರಿ

ಗಾಯಕಿ ಕೇಟಿ ಪೆರ್ರಿ ಕೂಡ ಭಾರತದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.  ಕಷ್ಟದ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸುವುದಾಗಿ ಘೋಷಿಸಿದ್ದಾರೆ.

“ಭಾರತದಲ್ಲಿ ಸಾಂಕ್ರಾಮಿಕ ರೋಗವು ಈಗ ಅನುಭವಿಸುತ್ತಿರುವ ವಿನಾಶದ ಬಗ್ಗೆ ನೀವು ಕೇಳಿರಬಹುದು, ಪ್ರತಿದಿನ ಹೊಸ ದಾಖಲೆಯನ್ನು ಕೋವಿಡ್ ಪ್ರಕರಣಗಳ ಸಂಖ್ಯೆಗೆ ಹೆಚ್ಚಿನ ಗರಿಷ್ಠ ಮಟ್ಟವನ್ನು ಕಾಣುತ್ತಿದೆ. ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸಿವೆ. ಆಸ್ಪತ್ರೆಗಳಲ್ಲಿ ಬೆಡ್ ಆಕ್ಸಿಜನ್, ಐಸಿಯು ಗಳ ಕೊರತೆಯಿಂದ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ.ಅಲ್ಲಿನ ಪರಿಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ. ತಮ್ಮ ಅಪ್ಪನೋ, ಅಮ್ಮನೋ, ಅಕ್ಕನೋ ಅಣ್ಣನೋ ಸ್ಟ್ರೆಚರ್ ಮೇಲೆ ಕೊನೆಯುಸಿರೆಳೆಯುವಾಗ ಕುಟುಂಬದವರು ದುಃಖ ಪಡುತ್ತಿರುವ ದೃಶ್ಯಗಳು ಹೃದಯವಿದ್ರಾವಕವಾಗಿವೆ. ಅಲ್ಲಿನ ಪರಿಸ್ಥಿತಿಗೆ ನಾವು ಬೆಂಬಲ ನೀಡುವುದು ಅಗತ್ಯವಾಗಿದೆ. ನೀವು ಸಹಾಯ ಮಾಡಲು ಬಯಸಿದರೆ, ದಯವಿಟ್ಟು ನನ್ನ ಬಯೋದಲ್ಲಿನ ಲಿಂಕ್‌ ನ ಮೂಲಕ ದಾನ ಮಾಡಬಹುದು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಓದಿ : ಹೊರಗಿನಿಂದ ಬಂದವರನ್ನು ಮನೆಗೆ ಸೇರಿಸುವುದನ್ನು ಆದಷ್ಟು ತಪ್ಪಿಸಿ: ಉಡುಪಿ ಡಿಸಿ

ರಿಚರ್ಡ್ ಮ್ಯಾಡೆನ್

‘ಗೇಮ್ ಆಫ್ ಥ್ರೋನ್ಸ್ ನ ತಾರೆ ರಿಚರ್ಡ್ ಮ್ಯಾಡೆನ್ ಕೂಡ ತಮ್ಮ ಅಭಿಮಾನಿಗಳಿಗೆ ಭಾರತಕ್ಕೆ  ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ  ಅವರ ನಿಧಿಸಂಗ್ರಹದ ಲಿಂಕ್ ಹಂಚಿಕೊಂಡಿದ್ದು, “ದಯವಿಟ್ಟು ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡಿ ಮತ್ತು ಬೆಂಬಲಿಸಿ ಎಂದು ಕೇಳಿಕೊಂಡಿದ್ದಲ್ಲದೇ, ಈ ನಡೆಗಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಶ್ಲಾಘಿಸುವುದರೊಂದಿಗೆ ಧನ್ಯವಾದ ಹೇಳಿದ್ದಾರೆ.

ಓದಿ : ಖಾತೆಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ : ಗ್ರಾಹಕರಿಗೆ ಎಸ್ ಬಿ ಐ ಮನವಿ

ಮಿಂಡಿ ಕಾಲಿಂಗ್

ಕಾಮಿಡಿ ಸ್ಟಾರ್ ನಟಿ ಮಿಂಡಿ ಕಾಲಿಂಗ್ ಕೂಡ ಭಾರತದ ಸಂಕಷ್ಟಕ್ಕೆ ಧ್ವನಿಯಾಗಿದ್ದಾರೆ. “ಭಾರತದಲ್ಲಿನ ಕೋವಿಡ್ ಬಿಕ್ಕಟ್ಟನ್ನು ಬೆಂಬಲಿಸಲು ಎಲ್ಲರೂ ಸಹಾಯ ಮಾಡುವಂತೆ ಕೇಳಿಕೊಂಡಿದ್ದು, ದಾನ ಮಾಡುವವರು ದಯವಿಟ್ಟ್ಉ ದಾನ ಮಾಡಿ ನೀವು ನೀಡಿದ ಸಹಾಯ ಭಾರತದಲ್ಲಿ ಕೋವಿಡ್ ಸೋಂಕಿತರನ್ನು ರಕ್ಷಿಸಲು ವೈದ್ಯಕೀಯ ಸೌಲಭ್ಯಗಳಿಗಾಗಿ ಬಳಕೆಯಾಗುತ್ತದೆ. ಎಂದು ಹೇಳಿದ್ದಾರೆ.

ಓದಿ : ಕಿಮ್ಸ್‌ನಲ್ಲಿ ತಾಯಿ ದಾಖಲಿಸಲು ಶಾಸಕಿ ಕುಸುಮಾ ಪರದಾಟ

ರೀಸ್ ವಿದರ್ಸ್ಪೂನ್

ಪ್ರಿಯಾಂಕಾ ಚೋಪ್ರಾ ನಿಧಿಸಂಗ್ರಹ ಅಭಿಯಾನವನ್ನು ಬೆಂಬಲಿಸುವ ಮೂಲಕ, ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಹಾಯ ಮಾಡಲು ಕೈಜೋಡಿಸುವಂತೆ ಮನವಿ ಮಾಡುವ ಪ್ರಿಯಾಂಕಾ ಅವರ ವೀಡಿಯೊ ಸಂದೇಶವನ್ನು ರೀಸ್ ವಿದರ್ಸ್ಪೂನ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ನಿಧಿಸಂಗ್ರಹಣೆ ವಿವರಗಳನ್ನು ಹಂಚಿಕೊಂಡ ರೀಸ್, ” ಭಾರತದಲ್ಲಿ ಕೋವಿಡ್ ನಿಂದಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ  ಉಂಟಾಗಿದೆ. ದಯವಿಟ್ಟು ನಿಮಗೆ ಸಾಧ್ಯವಾದರೆ ಸಹಾಯ ಮಾಡಿ” ಎಂದು ಬರೆದುಕೊಂಡಿದ್ದಾರೆ.

ಓದಿ : ಭಾರತದ ಕೋವಿಡ್ ಸಂಕಷ್ಟಕ್ಕೆ ಜರ್ಮನಿ ನೆರವು : ಬರಲಿದೆ ಬೃಹತ್ ಗಾತ್ರದ ಆಮ್ಲಜನಕ ಘಟಕ..!

Advertisement

Udayavani is now on Telegram. Click here to join our channel and stay updated with the latest news.

Next