Advertisement

ಹಿಂದಿನ ಸೇವೆ ಪರಿಗಣಿಸಲು ಆಗ್ರಹ

01:35 PM Jan 06, 2020 | Team Udayavani |

ಕೋಲಾರ: ವಿವಿಧ ಇಲಾಖೆ ಗಳಲ್ಲಿ ವಿಲೀನಗೊಂಡು ತಮ್ಮ ಸಕ್ರಮ ಹುದ್ದೆ ಗಳಲ್ಲೇ ಮುಂದುವರಿದಿರುವ ಜೆಒಸಿ ನೌಕರರು, ತಮ್ಮ ಹಿಂದಿನ  ಸೇವೆ  ಪರಿ ಗಣಿಸುವಂತೆ ಎಂಎಲ್‌ಸಿ ಪುಟ್ಟಣ್ಣ ನೇತೃತ್ವದಲ್ಲಿ ನೀಡಿದ ಮನವಿಗೆ ಸಿಎಂ ಸಕಾರಾತ್ಮವಾಗಿ ಸ್ಪಂದಿಸಿ, ಪರಿಶೀಲಿಸಿ ಕ್ರಮವಹಿಸುವ  ಭರವಸೆ ನೀಡಿದರು.

Advertisement

ಕೋಲಾರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜೆಒಸಿ ನೌಕರರು, ಭಾನುವಾರ ಬೆಂಗಳೂರಿನ ಸೂಲಿಕೆರೆಯ ಕನೂಜ್‌ ಬೆಲ್‌ ಫಾರಂಹೌಸ್‌ನಲ್ಲಿ ನಡೆದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫ‌ುಲೆ ಜನ್ಮ ದಿನ ಕಾರ್ಯ ಕ್ರಮದಲ್ಲಿ ವಿಧಾನ  ಪರಿಷತ್‌ ಸದಸ್ಯ ಪುಟ್ಟಣ್ಣ ಮೂಲಕ ಸಿಎಂಗೆ ಮನವಿ ಸಲ್ಲಿಸಿದ್ದರು.

ಸಿಎಂಗೆ ಧನ್ಯವಾದ: ಪದವಿ ಪೂರ್ವ ಜೆಒಸಿಯ ವಿವಿಧ ಕೋರ್ಸ್‌ಗಳಲ್ಲಿ ಸಂಭಾವನೆಯ ಆಧಾರದ ಮೇಲೆ ಸೇವೆ ಸಲ್ಲಿಸಿರುವ ನೌಕರರನ್ನು ರಾಜ್ಯಸರ್ಕಾರ 2012ರಲ್ಲಿ ವಿವಿಧ ಇಲಾಖೆ ಗಳಲ್ಲಿ ವಿಲೀನ ಗೊಳಿಸಿ ಸೇವಾ ಸಕ್ರಮಾತಿ ಮಾಡಿದ್ದು, ನಮ್ಮ ಬದುಕಿಗೆ ಭದ್ರತೆ ಒದಗಿಸಿದ್ದ  ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ 3600 ಕುಟುಂಬಗಳು ಜೀವನ ನಡೆಸು ವಂತಾಗಿದ್ದು, ಅವರಿಗೆ ನೌಕರರು ಧನ್ಯವಾದ ಸಲ್ಲಿಸಿದರು.

ನೆಮ್ಮದಿಯ ಬದುಕಿಗೆ ನ್ಯಾಯ ಒದಗಿಸಿ: ಆದರೆ, ಕಾಯಂಗೊಂಡ ದಿನಾಂಕದಿಂದ ಮಾತ್ರ ಸೇವೆ ಪರಿಗಣಿಸ ಲಾಗಿದೆ. ಇದರಿಂದ ಜೆಒಸಿ ಕೋಸ್‌ಗಳಲ್ಲಿ ನಾವು 20ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿ ನಮ್ಮ ಬದುಕಿನ ಅಮೂಲ್ಯ ದಿನಗಳನ್ನು ಕಳೆದುಕೊಂಡಿ ದ್ದೇವೆ. ಈ ಸೇವೆ ಪರಿಗಣಿಸದ  ಕಾರಣ ನಮಗೆ ಸಿಗಬೇಕಾದ ಪಿಂಚಣಿ, ಬಡ್ತಿ ಮತ್ತಿತರ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ, ಆದ್ದರಿಂದ ತಾವು ಮುಂದಿನ ನಮ್ಮ ನಿವೃತ್ತಿ  ಜೀವನದಲ್ಲಾದರೂ ನೆಮ್ಮದಿಯ ಬದುಕು ಕಾಣಲು ನ್ಯಾಯ ಒದಗಿಸಿ ಎಂದು ಸಿಎಂ ಆವರಲ್ಲಿ ಮನವಿ ಮಾಡಿದ್ದಾರೆ.

ಸೇವೆಯನ್ನು ಪರಿಗಣಿಸಿ: ಈಗಾಗಲೇ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸೇವಾ ಕಾಯಮಾತಿ ಮೊದಲಿನ ಸೇವೆ ಯನ್ನು ಸರ್ಕಾರ ಪರಿಗಣಿಸಲು  ಒಪ್ಪಿಗೆ ನೀಡಿದೆ, ಆದರೆ, ನಾವು ಹೆಚ್ಚಿನವರು ಸರ್ಕಾರಿ ಪದವಿ ಪೂರ್ವ ಕಾಲೇಜು ಗಳಲ್ಲಿ, ಹಲವರು ಅನುದಾನಿತ ಪಿಯು ಕಾಲೇಜುಗಳಲ್ಲಿ ಪೂರ್ಣ  ಕಾಲಿಕ ಕಾರ್ಯಭಾರದಡಿ ಸಂಭಾವನೆ ಆಧಾರದ ಮೇಲೆ ಮಾಡಿದ ಸೇವೆಯನ್ನು ಪರಿಗಣಿಸುತ್ತಿಲ್ಲ. ನಮಗೆ ನ್ಯಾಯ ತಮ್ಮಿಂದ ಮಾತ್ರ ಸಿಗಲು ಸಾಧ್ಯ  ಎಂದು ಅಳಲು ತೋಡಿಕೊಂಡರು. ನೌಕರರ ಸಂಘದ ಮುಖಂಡರಾದ ಶರಣಪ್ಪಗುಡ್ಡೆ, ಜೆ.ಮಣಿಕಂಠ, ಶಶಿಧರ್‌,  ಬಿ.ಶ್ರೀನಿವಾಸ್‌, ರೇಣುಕಾ,  ಸುಧಾ, ಕೆ.ಆರ್‌.ವೆಂಕಟೇಶ್‌, ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next