Advertisement

Urfi Javed ವಿಚಿತ್ರ ದಿರಿಸಿನ ಬಗ್ಗೆ ಕಮೆಂಟ್‌: ಸಿಡಿದೆದ್ದ ನಟಿ

09:59 PM Jul 24, 2023 | Team Udayavani |

ಮುಂಬೈ: ಫ್ಯಾಶನ್‌ ಸೆನ್ಸ್‌, ವಿಭಿನ್ನ ಶೈಲಿಯ ದಿರಿಸಿನಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಎಂದರೆ ಅದು ಊರ್ಫಿ ಜಾವೇದ್‌.

Advertisement

ತಮ್ಮ ಡ್ರೆಸಿಂಗ್‌ ಸೆನ್ಸ್‌ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವಂತೆಯೇ, ಆಕೆಗೆ ಅನೇಕ ಮಂದಿ ಟೀಕಾಕಾರರು ಇದ್ದಾರೆ. ಇತ್ತೀಚೆಗಷ್ಟೇ ಅವರ ಬಟ್ಟೆ ಬಗ್ಗೆ ಕಮೆಂಟ್‌ ಮಾಡಿದ ವ್ಯಕ್ತಿಯೊಬ್ಬರಿಗೆ ಊರ್ಫಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಆ ವಿಡಿಯೊ ಈಗ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹಸಿರು ನಿಲುವಂಗಿಯಂಥ ಬಟ್ಟೆ ತೊಟ್ಟಿದ್ದ ಊರ್ಫಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಆಕೆಯನ್ನು ನೋಡಿ, ” ನಿಮ್ಮಂಥವರು ದೇಶದ ಹೆಸರು ಹಾಳು ಮಾಡುತ್ತೀರಿ’ಎಂದಿದ್ದಾರೆ.

ಪ್ರತಿಕ್ರಿಯಿಸಿದ ಆಕೆ, “ನಿಮ್ಮಪ್ಪಂದು ಏನಾದರೂ ಮರ್ಯಾದೆ ಹೋಗಿದೆಯಾ? ಇಲ್ಲವಲ್ಲ? ಮತ್ತೆ ಹೋಗಿ ನಿಮ್ಮ ಕೆಲಸ ನೋಡಿಕೊಳ್ಳಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next