Advertisement

ಕೆಂಡಾಲ್ ಜೆನ್ನರ್ ಡ್ರೆಸ್ ಕಾಪಿ ಮಾಡಿ ಟ್ರೋಲ್ ಆದ ಉರ್ಫಿ ಜಾವೇದ್!

05:35 PM Nov 15, 2021 | Team Udayavani |

ಮುಂಬಯಿ: ವಿಲಕ್ಷಣ ಮತ್ತು ವಿಚಿತ್ರ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿರುವ ಕಿರುತೆರೆ ನಟಿ ಉರ್ಫಿ ಜಾವೇದ್ ಈಗ ಮತ್ತೆ ಸುದ್ದಿಯಾಗಿದ್ದಾರೆ.

Advertisement

ಬಿಗ್ ಬಾಸ್, ಓಟಿಟಿ ಖ್ಯಾತಿಯ ಉರ್ಫಿ ಈ ಬಾರಿ ಸೂಪರ್ ಮಾಡೆಲ್ ಕೆಂಡಾಲ್ ಜೆನ್ನರ್ ಅನ್ನು ಅನುಸರಿಸಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

ರಿಯಾಲಿಟಿ ಟಿವಿ ತಾರೆಯನ್ನು ಭಾನುವಾರ ಮುಂಬೈನಲ್ಲಿ ವಿಹಾರಕ್ಕೆ ತೆರಳಿದ ಸಂದರ್ಭ ಕಟ್-ಔಟ್ ಮ್ಯಾಕ್ಸಿ ಡ್ರೆಸ್ ಅನ್ನು ಧರಿಸಿ ಎಲ್ಲರ ಗಮನ ಸೆಳೆದರು.

ಕೆಂಡಾಲ್ ಜೆನ್ನರ್ ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತೆ ಲಾರೆನ್ ಪೆರೆಜ್ ಅವರ ಮದುವೆಯ ಸಂಭ್ರಮದಲ್ಲಿ ಧರಿಸಿದ್ದ ವಿಭಿನ್ನ ವಿನ್ಯಾಸದ ಕಿಟಕಿ ಮಾದರಿಯ ಬಟ್ಟೆಯನ್ನು ನಿಖರವಾಗಿ ಹೋಲುತ್ತದೆ ಎಂದು ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next