Advertisement

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

03:58 PM Sep 19, 2020 | Suhan S |

ಮೈಸೂರು: ನಗರದ ಪೀಪಲ್ಸ್‌ ಪಾರ್ಕ್‌ನಲ್ಲಿ 5.3 ಕೋಟಿ ರೂ. ವೆಚ್ಚದಲ್ಲಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ನಗರ ಕೇಂದ್ರ ಗ್ರಂಥಾಲಯ ಕಟ್ಟಡ ಹಾಗೂ ಡಿಜಿಟಲ್‌ ಗ್ರಂಥಾಲಯವನ್ನು ಸಚಿವದ್ವಯರು ಉದ್ಘಾಟಿಸಿದರು.

Advertisement

ಶುಕ್ರವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಟಿ. ಸೋಮಶೇಖರ್‌ ನಗರ ಕೇಂದ್ರ ಗ್ರಂಥಾಲಯ ಕಟ್ಟಡವನ್ನು ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಡಿಜಿಟಲ್‌ ಗ್ರಂಥಾಲಯವನ್ನುಲೋಕಾರ್ಪಣೆಗೊಳಿಸಿದರೆ,ಮಹಾನಗರ ಪಾಲಿಕೆ ಮೇಯರ್‌ ತಸ್ನೀಂ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಪುಸ್ತಕ ಪ್ರದರ್ಶನ: ಶುಕ್ರವಾರ ಒಂದು ದಿನದಮಟ್ಟಿಗೆ ಹಳೆಯ ಹಾಗೂ ಹೊಸ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮೇಯರ್‌ ತಸ್ನೀಂ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು. ಸಾರ್ವಜನಿಕರಿಗೆ ಒಂದು ದಿನದ ಪ್ರದರ್ಶನಕ್ಕೆ ಮುಕ್ತ ಅವಕಾಶಕಲ್ಪಿಸಲಾಗಿತ್ತು. ಸಾಂಕೇತಿಕವಾಗಿ ಡಿಜಿಟಲ್‌ ಲೈಬ್ರರಿಯನ್ನು ಉದ್ಘಾ ಟಿಸಲಾಗಿದ್ದು, ಸದ್ಯಕ್ಕೆ ಇರುವ ಕೆಲವು ಕಂಪ್ಯೂಟರ್‌ ಗಳಲ್ಲಿ ನಿಯಮಿತ ಪುಸ್ತಕಗಳ ಇ-ಬುಕ್‌ ಕಾಪಿ ಲಭ್ಯ ವಿರಲಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕಂಪ್ಯೂಟರ್‌ ಹಾಗೂ ಹೆಚ್ಚು ಇ-ಬುಕ್‌ಗಳವ್ಯ ವಸ್ಥೆ ಮಾಡಲಾಗುತ್ತದೆ ಎಂದು ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ.ಮಂಜುನಾಥ್‌ ತಿಳಿಸಿದ್ದಾರೆ.

ನೂತನ ನಗರಕೇಂದ್ರ ಗ್ರಂಥಾಲಯಕಟ್ಟಡಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ವತಿಯಿಂದ ನಗರದ ಪೀಪಲ್ಸ್‌ ಪಾರ್ಕ್‌ ನಲ್ಲಿ 400×340 ಅಡಿ ಅಳತೆಯಲ್ಲಿ,5.3ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿ ಬಿ.ಶರತ್‌, ಸಾರ್ವಜನಿಕ ಗ್ರಂಥಾಲಯಇಲಾಖೆಯ ನಿರ್ದೇಶಕಡಾ.ಸತೀಶ್‌ಕುಮಾರ್‌ ಎಸ್‌.ಹೊಸಮನಿ, ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ.ಮಂಜು ನಾಥ್‌, ಕೆಆರ್‌ಐಡಿಎಲ್‌ನ ಮುಖ್ಯ ಅಭಿಯಂತರ ಎಂ.ಮಹದೇವಸ್ವಾಮಿ, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಸಿಪಿ ಪ್ರಕಾಶ್‌ ಗೌಡ, ಶಾಸಕರಾದಜಿ.ಟಿ.ದೇವೇಗೌಡ,ಎಲ…. ನಾಗೇಂದ್ರ, ಎಸ್‌.ಎ.ರಾಮದಾಸ್‌, ಹರ್ಷವರ್ಧನ್‌ ಇದ್ದರು.

ನೂತನ ಗ್ರಂಥಾಲಯದ ವಿಶೇಷತೆ : ಗ್ರಂಥಾಲಯದಲ್ಲಿ ಸುಮಾರು 36 ಸಾವಿರ ಪುಸ್ತಕಗಳಿದ್ದು,ದಿನಪತ್ರಿಕೆಹಾಗೂನಿಯತಕಾಲಿಕೆಗಳ ಲಭ್ಯತೆಯೂ ಇದೆ. ಜೊತೆಗೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ಪ್ರತ್ಯೇಕ ವಾಚನಾ ಲಯ ವಿಭಾಗಗಳನ್ನುಕಟ್ಟಡ ಒಳಗೊಂಡಿದೆ. ಕಟ್ಟಡದ ನೆಲಮಹಡಿಯಲ್ಲಿ ಪುಸ್ತಕ ವಿತರಣಾ ವಿಭಾಗ, ವಾಚನಾ ವಿಭಾಗ, ಸ್ಪರ್ಧಾತ್ಮಕ ಪರೀûಾ ವಿಭಾಗ, ಇ-ಗ್ರಂಥಾಲಯ, ಬ್ರೈಲ್‌ ಹಾಗೂ ದಿವ್ಯಾಂಗರ ವಿಭಾಗ, ಹಿರಿಯ ನಾಗರಿಕರ ವಿಭಾಗ, ಮಕ್ಕಳ ವಿಭಾಗ, ಮಹಿಳೆಯರ ವಿಭಾಗ, ಶೌಚಾಲಯಗಳು ಇರಲಿವೆ. ಮೊದಲನೆಯ ಮಹಡಿಯಲ್ಲಿ ಗ್ರಂಥಾಲಯ ಅಧಿಕಾರಿಗಳ ಕಾರ್ಯಾಲಯ, ಆಡಳಿತಾತ್ಮಕ ವಿಭಾಗ ಹಾಗೂ ತರಬೇತಿ ಕೊಠಡಿ ಇದೆ. ಅಲ್ಲದೇ ಗ್ರಂಥಾಲಯ ಆವರಣದಲ್ಲಿ ಔಷಧೀಯ ಸಸ್ಯಗಳ ಉದ್ಯಾನವನ, ಲ್ಯಾಂಡ್‌ ಸ್ಕೇಪಿಂಗ್‌, ದ್ವಿಚಕ್ರ ವಾಹನ ನಿಲ್ದಾಣ, ಪಾಥ್‌ ವೇ,ಕಲ್ಲಿನಬೆಂಚ್‌ಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಅದರೊಂದಿಗೆ ಮಳೆ ನೀರು ಕೊಯ್ಲು ಈಗಾಗಲೇ ಅಳವಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next