Advertisement

ಯಂತ್ರಗಳ ಒಡನಾಟ ಬಿಟ್ಟು ನಾಗರಿಕ ಸೇವೆಯತ್ತ!

01:41 PM Apr 06, 2019 | Vishnu Das |

ಯುಪಿಎಸ್ಸಿಯಲ್ಲಿ 45ನೇ ರ್‍ಯಾಂಕ್‌ ಪಡೆದ ಲಕ್ಷ್ಮೀ , ವೈದ್ಯ ಎಸ್‌.ಆಕಾಶ್‌ಗೆ ಕನಸು ನನಸಾದ ಸಮಯ

Advertisement

ಬೆಂಗಳೂರು/ಹುಬ್ಬಳ್ಳಿ: “ಈ ಮೊದಲು ನನ್ನ ಒಡನಾಟ ಯಂತ್ರಗಳೊಂದಿಗೆ ಇತ್ತು. ಬೆಳಗಾದರೆ ಕಂಪ್ಯೂಟರ್‌ ಮುಂದೆ ಕುಳಿತು,
ವ್ಯವಹರಿಸುವುದು ಉದ್ಯೋಗವಾಗಿತ್ತು. ಇದು ಅಪ್ಪ-ಅಮ್ಮನಿಗೂ ತಕ್ಕಮಟ್ಟಿಗೆ ತೃಪ್ತಿ ತಂದಿತ್ತು. ಆದರೆ, ನನಗೆ ವೈಯಕ್ತಿಕವಾಗಿ ತೃಪ್ತಿ ಇರಲಿಲ್ಲ. ಪ್ರತಿಭೆ ನಾಗರಿಕ ಸೇವೆಗೆ ಮೀಸಲಾಗಬೇಕು ಎಂದು ಅನಿಸಿತು. ಅದರ ಫ‌ಲವೇ ಯುಪಿಎಸ್ಸಿಯಲ್ಲಿ 45ನೇ ರ್‍ಯಾಂಕ್‌ ಗಳಿಕೆ’ -ಇದು ಯುಪಿಎಸ್ಸಿ ಪರೀಕ್ಷೆಯಲ್ಲಿ 45ನೇ ರ್‍ಯಾಂಕ್‌ ಗಳಿಸಿದ ಎನ್‌.ಲಕ್ಷ್ಮೀ ಅವರ ಅನಿಸಿಕೆ.

ಫ‌ಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ “ಉದಯವಾಣಿ’ಯೊಂದಿಗೆ ಅವರು ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಒಂದು ವರ್ಷ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದೆ. ಆದರೆ, ಅದರಲ್ಲಿನ ಏಕತಾನತೆ ಮನಸ್ಸಿಗೆ ಖುಷಿ ಕೊಡಲಿಲ್ಲ. ಆದ್ದರಿಂದ ಅದನ್ನು ಅಪ್ಪನಿಗೆ ಹೇಳಿದೆ. ಜತೆಗೆ ಐಎಎಸ್‌ ಮಾಡುವ ಕನಸನ್ನೂ
ಬಿಚ್ಚಿಟ್ಟೆ. ಅಪ್ಪ-ಅಮ್ಮನೂ ಪ್ರೋತ್ಸಾಹಿಸಿದರು. ನಿತ್ಯ ಏಳೆಂಟು ತಾಸು ಓದುತ್ತಿದ್ದೆ. ಕಠಿಣ ಪರಿಶ್ರಮದಿಂದ ಮೂರನೇ ಪ್ರಯತ್ನದಲ್ಲಿ ಉತ್ತೀರ್ಣಳಾದೆ. ರಾಜ್ಯಕ್ಕೇ ಸೇವೆ ಸಲ್ಲಿಸುವ ಅವಕಾಶ ಬರಲಿ ಎಂಬುದು ನನ್ನ ಆಸೆ ಎಂದರು.

ಅಂದಹಾಗೆ ಲಕ್ಷ್ಮೀ ಮೂಲತ: ನಗರದ ಮಲ್ಲೇಶ್ವರದವರು. ನಾಗರಿಕ ಸೇವೆಗೆ ವಾಲಿದ ವೈದ್ಯ: 78ನೇ ರ್‍ಯಾಂಕ್‌ ಗಳಿಸಿದ ಎಸ್‌.ಆಕಾಶ್‌, ಓದಿದ್ದು
ಎಂಬಿಬಿಎಸ್‌. ಆದರೆ, ಈಗ ನಾಗರಿಕ ಸೇವೆಯತ್ತ ಮುಖಮಾಡುತ್ತಿದ್ದಾರೆ. ಮೂಲತಃ ಮೈಸೂರಿನ ಆಕಾಶ್‌, ಎಂಬಿಬಿಎಸ್‌ ಪೂರೈಸಿ ಬೆಂಗಳೂರು
ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ನಾಗರಿಕ ಸೇವೆ ಸಲ್ಲಿಸಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು.
ಆದರೆ, ಅಕಾಡೆಮಿಕ್‌ನಲ್ಲಿ ನಾನು ಆರಂಭದಿಂದಲೂ ಮುಂದೆ ಇದ್ದುದರಿಂದ
ಜೀವನ ಭದ್ರತೆಗೆ ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಂಡೆ. 2013ರಿಂದ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಈ ಮಧ್ಯೆ, ನಿತ್ಯ 10ರಿಂದ 12
ತಾಸು ಅಭ್ಯಾಸ ಮಾಡುತ್ತಿದ್ದೆ. ಆರನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣನಾದೆ’ ಎಂದು ಹೇಳಿದರು.

ನೂರನೇ ರ್‍ಯಾಂಕ್‌ ಗಳಿಸಿರುವ ಮೈಸೂರಿನ ಕೃತಿಕಾ, ಯಾವುದೇ ಕೋಚಿಂಗ್‌ ಕ್ಲಾಸ್‌ ಇಲ್ಲದೆ ಮನೆಯಲ್ಲೇ ವ್ಯಾಸಂಗ ಮಾಡಿ ಸತತ 6ನೇ
ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. “ನಾನು ನಿತ್ಯ 7-8 ಗಂಟೆ ವ್ಯಾಸಂಗ ಮಾಡುತ್ತಿದ್ದೆ. 5ನೇ ಪ್ರಯತ್ನದಲ್ಲಿ ಐಅರ್‌ಎಸ್‌ ಆಗಿ ಉತ್ತೀರ್ಣಗೊಂಡೆ. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ’ ಎಂದು ತಿಳಿಸಿದರು.

Advertisement

ಹುಬ್ಬಳ್ಳಿ ಹುಡುಗನ ಸಾಧನೆ: ಹುಬ್ಬಳ್ಳಿ ನಿವಾಸಿ ರಾಹುಲ್‌ ಶರಣಪ್ಪ ಸಂಕನೂರ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಅವರ
ಸಂಬಂಧಿ. ಪ್ರಾಥಮಿಕ ಶಿಕ್ಷಣವನ್ನು ಹಿಡಕಲ್‌, 7ನೇ ತರಗತಿಯನ್ನು ಖಾನಾಪುರ ಶಾಲೆಯಲ್ಲಿ ಕಲಿತಿದ್ದು, 8-12ನೇ ತರಗತಿಯನ್ನು ಮೈಸೂರಿನ
ರಾಮಕೃಷ್ಣ ಆಶ್ರಮದಲ್ಲಿ ಪೂರೈಸಿದ್ದಾರೆ. ಬಳಿಕಎಂಜಿನಿಯರಿಂಗ್‌ ಹಾಗೂ ಮೆಡಿಕಲ್‌ನಲ್ಲಿ 26ನೇ ರ್‍ಯಾಂಕ್‌ ಪಡೆದು ಬೆಂಗಳೂರಿನ ಆ ರ್‌.ವಿ
ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿ ಯುಪಿಎಸ್‌ಸಿ ಪರೀಕ್ಷೆ
ಎದುರಿಸಲು ಕೆಲಸಕ್ಕೆ ರಾಜೀನಾಮೆ ನೀಡಿ ದೆಹಲಿಯಲ್ಲಿ ತರಬೇತಿ ಪಡೆದಿದ್ದಾರೆ. 3ನೇ ಬಾರಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಿದ್ದಾರೆ. ತಂದೆ
ಲೋಕೋಪಯೋಗಿ ಇಲಾಖೆ ನಿವೃತ್ತ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next