Advertisement
ಇದನ್ನೂ ಓದಿ:UPSC ಫಲಿತಾಂಶ: ಕೋಚಿಂಗ್ ಸೆಂಟರ್ ಗೆ ಹೋಗದೆ 390ನೇ ರ‍್ಯಾಂಕ್ ಪಡೆದ ಮೈಸೂರಿನ ಪೂಜಾ ಮುಕುಂದ್
Related Articles
Advertisement
2022ರ ಜೂನ್ 5ರಂದು ಯುಪಿಎಸ್ಸಿ ಸಿಎಸ್ ಇ ಪರೀಕ್ಷೆ ನಡೆದಿತ್ತು. ಈ ಬಾರಿ ಒಟ್ಟು 11,35,697 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 5,75,735 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಯಾರೀಕೆ ಇಶಿತಾ ಕಿಶೋರ್?
ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪರೀಕ್ಷೆಯ ಟಾಪರ್ ಇಶಿತಾ ಕಿಶೋರ್ ಎಕಾನಾಮಿಕ್ಸ್ ಪದವೀಧರೆಯಾಗಿದ್ದು, ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಪದವಿ ಪಡೆದಿದ್ದರು. ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇಶಿತಾ ಈ ಮೊದಲು ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯನ್ನು ಎದುರಿಸಿದ್ದು, ಇದೀಗ ಮೂರನೇ ಬಾರಿಯ ಪ್ರಯತ್ನದಲ್ಲಿ ಯಶಸ್ಸು ಕಾಣುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇಶಿತಾ ಕಿಶೋರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ಅವರ ಸಾಧನೆಗಳನ್ನು ಮೆಚ್ಚಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.