Advertisement

UPSC ಸಿವಿಲ್‌ ಪ್ರಿಲಿಮ್ಸ್‌ ಪರೀಕ್ಷೆ ಇಂದು : 2 ಹಂತ

12:14 AM Jun 16, 2024 | Team Udayavani |

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ 2024ರ ನಾಗರೀಕ ಸೇವಾ ಪರೀಕ್ಷೆಯ ಪ್ರಿಲಿಮ್ಸ್‌ ಸೋಮವಾರ ನಡೆಯಲಿದೆ. ಬೆಂಗಳೂರು ಸೇರಿದಂತೆ ದೇಶದ 79 ಕೇಂದ್ರಗಳಲ್ಲಿ ಪರೀಕ್ಷೆಗಾಗಿ ಎಲ್ಲ ಸಿದ್ಧತೆ ನಡೆಸಲಾಗಿದೆ.

Advertisement

ಈ ಪರೀಕ್ಷೆಯು 2 ಹಂತಗಳಲ್ಲಿ ನಡೆಯಲಿದ್ದು ಮೊದಲ ಹಂತ ಬೆಳಗ್ಗೆ 09.30ಕ್ಕೆ ಹಾಗೂ 2ನೇ ಹಂತ ಅಪರಾಹ್ನ 02.30ಕ್ಕೆ ಆರಂಭವಾಗಲಿದೆ. ಪರೀಕ್ಷಾರ್ಥಿಗಳು ತಮ್ಮ ಅಡ್ಮಿಟ್‌ ಕಾರ್ಡ್‌ ಅನ್ನು ಹಾಗೂ ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ಆಯೋಗ ತಿಳಿಸಿದೆ.

ಇ-ಅಡ್ಮಿಟ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಫ‌ಲಿತಾಂಶ ಬರುವವರೆಗೂ ತಮ್ಮ ಬಳಿ ಇರಿಸಿ ಕೊಳ್ಳಬೇಕೆಂದು ಆಯೋಗ ಹೇಳಿದೆ. ಅಡ್ಮಿಟ್‌ ಕಾರ್ಡ್‌ ಅನ್ನು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳ ಬಹುದಾಗಿದೆ. ಪರೀಕ್ಷೆ ಆರಂಭಕ್ಕೂ 30 ನಿಮಿಷ ಮುನ್ನ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಇರುವುದು ಕಡ್ಡಾಯ. ಮೊಬೈಲ್‌, ಸ್ಮಾರ್ಟ್‌ ವಾಚ್‌ನಂತಹ ಎಲೆಕ್ಟ್ರಾನಿಕ್‌ ಸಾಧನ ಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next