Advertisement

ಯುಪಿಎಸ್‌ಸಿ ಸಾಧನೆ: ಚಾಲಕನ ಪುತ್ರ ಶೌಕತ್‌ ಅಝೀಂ ಉತ್ತೀರ್ಣ

01:37 AM Jun 01, 2022 | Team Udayavani |

ಕಾರ್ಕಳ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ವಾಹನ ಚಾಲಕನ ಪುತ್ರ ಮೊಹಮ್ಮದ್‌ ಶೌಕತ್‌ ಅಝೀಂ 914 ಅಂಕ ಪಡೆದಿದ್ದು 545ನೇ ರ್‍ಯಾಂಕ್‌ ಗಳಿಸಿದ್ದಾರೆ.

Advertisement

ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳದ ಎಸ್‌ವಿಟಿ ಶಾಲೆಯಲ್ಲಿ ಪೂರೈಸಿ ಕೆಎಂಇಎಸ್‌ ಕಾಲೇಜಿನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದು, ಅನಂತರ ಮೂಡುಬಿದಿರೆ ಸಮೀಪದ ಮಿಜಾರಿನ ಮೈಟ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್‌ ನಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿದ್ದಾರೆ. ಬಳಿಕ ಕರ್ನಾಟಕ ಸರಕಾರ ವತಿಯಿಂದ ಯುಪಿಎಸ್‌ಸಿ ಪರಿಕ್ಷೆ ತರಬೇತಿಗೆ ಆಯ್ಕೆಯಾಗಿ ಪ್ರೋತ್ಸಾಹಧನ ದೊಂದಿಗೆ ತರಬೇತಿ ಪಡೆದರು.

2016ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ ಇವರು ಇದೀಗ ಸತತ 7ನೇ ಪ್ರಯತ್ನದಲ್ಲಿ ಉತ್ತಮ ರ್‍ಯಾಂಕ್‌ ನೊಂದಿಗೆ ಯಶಸ್ಸು ಗಳಿಸಿದ್ದಾರೆ. 2021ನೇ ಸಾಲಿನ ಪರೀಕ್ಷೆಯಲ್ಲಿ ದೇಶಾದ್ಯಂತ 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಶೌಕತ್‌ ಅಝೀಂ ಬಡಕುಟುಂಬದಲ್ಲಿ ಜನಿಸಿದ್ದು ಅವರ ತಂದೆ ಶೇಕ್‌ ಅಬ್ದುಲ್‌ ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದಾರೆ. ತಾಯಿ ಮೈಮುನ ಮೊದಲು ಬೀಡಿಕಟ್ಟುತ್ತಿದ್ದರು.

ಕಷ್ಟದ ಸಂದರ್ಭದಲ್ಲಿಯು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಹೆತ್ತವರೇ ನನಗೆ ಪ್ರೇರಣೆ. ಪ್ರತೀ ದಿನ 5 ಗಂಟೆ ಸತತ ಪರೀಕ್ಷಾ ಪೂರ್ವ ತಯಾರಿ ನಡೆಸುತ್ತಿದ್ದೆ. ಕೇವಲ ಓದು ಮಾತ್ರವಲ್ಲ, ಜತೆಗೆ ಸಾಮಾಜಿಕ ಜ್ಞಾನ ನನಗೆ ಮುಖ್ಯವಾಗಿತ್ತು. ಪ್ರಯತ್ನದ ಫಲದಿಂದ ಯಶಸ್ಸು ಸಿಕ್ಕಿದೆ.
– ಮೊಹಮ್ಮದ್‌ ಶೌಕತ್‌

ಕೊಡಗಿನ ರಾಜೇಶ್‌ಗೆ 222ನೇ ರ್‍ಯಾಂಕ್‌
ಮಡಿಕೇರಿ: ಯುಪಿಎಸ್‌ಸಿ 2021ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೊಡಗು ಮೂಲದ ಮುಂಡಂಡ ರಾಜೇಶ್‌ ಪೊನ್ನಪ್ಪ 222ನೇ ರ್‍ಯಾಂಕ್‌ ಗಳಿಸುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.

Advertisement

ಮೂಲತಃ ಮಡಿಕೇರಿ ತಾಲೂಕು ನೆಲಜಿ ಗ್ರಾಮದ ಮುಂಡಂಡ ಜಯಾ ಪೂವಯ್ಯ ಹಾಗೂ ಸುಧಾ ಪೂವಯ್ಯ ದಂಪತಿಯ ಪುತ್ರ ರಾಜೇಶ್‌ ಅವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಹಾಗೂ ಕಾನೂನು ಪದವಿಯನ್ನು ಅತ್ಯುನ್ನತ ದರ್ಜೆಯಲ್ಲಿ ಪೂರೈಸಿದ್ದು, ಐಎಎಸ್‌ ಅಧಿಕಾರಿಯಾಗುವ ಗುರಿಯೊಂದಿಗೆ 3 ವರ್ಷಗಳಿಂದ ಅಧ್ಯಯನದಲ್ಲಿ ತೊಡಗಿದ್ದರು. 3ನೇ ಪ್ರಯತ್ನದಲ್ಲಿ ಉತ್ತಮ ರ್‍ಯಾಂಕ್‌ನಲ್ಲಿ ಗುರಿ ಸಾಧಿಸುವ ಮೂಲಕ ಕೊಡಗು ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಅವರು ಪರೀಕ್ಷೆಗೆ ತಯಾರಿ ಜತೆಗೆ ಹಲವು ಪರೀûಾರ್ಥಿಗಳಿಗೂ ಮಾರ್ಗದರ್ಶನ ನೀಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next