Advertisement

ಆರ್ಥಿಕ ಸಂಕಷ್ಟ : ಬೆಂಗಳೂರಿನಿಂದ ಊರಿಗೆ ಬಂದ ವ್ಯಕ್ತಿ ಆತ್ಮಹತ್ಯೆ

10:38 PM Jul 19, 2022 | Team Udayavani |

ಉಪ್ಪುಂದ : ಸರಿಯಾದ ಕೆಲಸ ಇಲ್ಲದೇ ಇದ್ದು ಆರ್ಥಿಕ ಸಂಕಷ್ಟದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.18ರಂದು ಸಂಭವಿಸಿದೆ.

Advertisement

ಉಳ್ಳೂರು, ಮೂಡುಮಠ ಉದ್ದಿನಹಕ್ಲು ರಾಘವೇಂದ್ರ ಶೆಟ್ಟಿ (42 ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ರಾಘವೇಂದ್ರ ಶೆಟ್ಟಿ ಬೆಂಗಳೂರಿನ ಜಯನಗರದಲ್ಲಿ ಕ್ಯಾಟರಿಂಗ್ ಸರ್ವಿಸ್ ಕೆಲಸ ಮಾಡಿಕೊಂಡಿದ್ದು ಜು.18ರಂದು ಬೆಂಗಳೂರಿನಿಂದ ಉದ್ದಿನಹಕ್ಲು ಮೂಡುಮಠ ಮನೆಗೆ ಬೆಳಗ್ಗೆ ಬಂದಿದ್ದಾರೆ. ಸಂಜೆ ಮನೆಯಲ್ಲಿ ಸ್ನಾನ ಮಾಡಿ ತನ್ನ ತಂಗಿ ಅವರಲ್ಲಿ ತನಗೆ ಸರಿಯಾದ ಕೆಲಸ ಇಲ್ಲ ಜೀವನ ನಿರ್ವಹಣೆಗೆ ಕಷ್ಟ ಆಗಿದೆ ಜೀವನವೇ ಬೇಡ ಎಂಬುದಾಗಿ ಹೇಳಿ ಹೋಗಿದ್ದರು.

ರಾಘವೇಂದ್ರ ಶೆಟ್ಟಿ ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು, ಉಳ್ಳೂರು ಗ್ರಾಮದ ಗೈಡರ ಶೆಡ್ ಬಳಿಯ ಹಾಡಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬೈಂದೂರು ಪೊಲೀಸ್‌ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ : ಅಗ್ನಿಪಥ: ಜಾತಿ ಪ್ರಮಾಣಪತ್ರ ಆರೋಪಕ್ಕೆ ಕೇಂದ್ರ, ಸೇನೆ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next