Advertisement
ಬಿಜೆಪಿಗೆ 12 ಸ್ಥಾನ ಗೆಲ್ಲುವ ನಿರೀಕ್ಷೆಬೆಂಗಳೂರು: ಉಪ ಚುನಾವಣೆ ಬೆನ್ನಲ್ಲೇ ಎದುರಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. 25 ಸ್ಥಾನಗಳಲ್ಲಿ ಬಿಜೆಪಿ ಪ್ರಸ್ತುತ ಆರು ಸ್ಥಾನಗಳನ್ನು ಹೊಂದಿದ್ದು ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿರುವುದರಿಂದ 10 ರಿಂದ 12 ಸ್ಥಾನ ಗೆಲ್ಲುವ ಗುರಿ ಹೊಂದಿದೆ.
Related Articles
ಬೆಂಗಳೂರು: ಉಪ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಕಹಿ ಇನ್ನೂ ಹಾಗೇ ಇದೆ. ಅಷ್ಟರಲ್ಲಿ ಜೆಡಿಎಸ್ ಮತ್ತೂಂದು “ಅಗ್ನಿಪರೀಕ್ಷೆ’ ಎದುರಾಗಿದೆ. ಅತ್ತ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ 25 ಸ್ಥಾನಗಳಿಗೆ ನಡೆಯುವ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇತ್ತ ಜೆಡಿಎಸ್‌ನಲ್ಲಿ ಲೆಕ್ಕಾಚಾರಗಳು ಶುರುವಾಗಿವೆ.
Advertisement
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಭ್ಯರ್ಥಿಗಳನ್ನು ಹುಡುಕುವುದೇ ಆ ಪಕ್ಷಕ್ಕೆ ದೊಡ್ಡ ಸವಾಲಾಗಿದೆ! ತೆರವಾಗಲಿರುವ 25 ಸ್ಥಾನಗಳಲ್ಲಿ ಇರುವ ಜೆಡಿಎಸ್ ಸ್ಥಾನಗಳು ನಾಲ್ಕು. ಆ ಹಾಲಿ ಸದಸ್ಯರು ಕೂಡ ಈಗ ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಒತ್ತಟ್ಟಿಗೆ ಇರಲಿ, ಈಗಿರುವ ಸ್ಥಾನಗಳನ್ನು ಯಥಾವತ್ತಾಗಿ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಪ್ರಬಲ ಅಭ್ಯ ರ್ಥಿಗಳ ಹುಡುಕಾಟ ನಡೆಸಬೇಕಾಗಿದೆ. ಆ ಆಯ್ಕೆಗಳು ಬಿಜೆಪಿ ಮತ್ತು ಕಾಂಗ್ರೆಸ್ ಕಣಕ್ಕಿಳಿ ಸುವ ಅಭ್ಯರ್ಥಿ ಗಳನ್ನು ಅವಲಂಬಿಸಿವೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. “ಪ್ರಸ್ತುತ ಸಂದೇಶ ನಾಗರಾಜ್, ಮನೋಹರ್, ಕಾಂತರಾಜು ಮತ್ತು ಅಪ್ಪಾಜಿಗೌಡ ಅವರು ಜೆಡಿಎಸ್ ಪ್ರತಿನಿಧಿಸುತ್ತಿದ್ದಾರೆ. ಬರುವ ಚುನಾವಣೆ¿ ುಲ್ಲಿ ಈ ನಾಲ್ಕು ಸ್ಥಾನ ಗಳನ್ನು 10ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಸಿದ್ಧತೆ ನಡೆದಿದೆ. ಸದ್ಯ ಪಕ್ಷದ “ಜನತಾ ಸಂಗಮ’ ಕಾರ್ಯಾಗಾರ ಕೂಡ ನಡೆಯುತ್ತಿದ್ದು, ಅಲ್ಲಿ ಮುಂಬರುವ ಚುನಾವಣೆಗಳನ್ನು ಎದುರಿಸುವ ವಿಷಯದ ಬಗ್ಗೆಯೂ ಚರ್ಚೆ ಇದೆ. ಅದನ್ನು ಮತ್ತಷ್ಟು ಗಂಭೀರವಾಗಿ ಚರ್ಚೆ ನಡೆಸಲಾಗುವುದು.
ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆಬೆಂಗಳೂರು: 25 ಸ್ಥಾನಗಳ ಪೈಕಿ ಪ್ರಸ್ತುತ ಕಾಂಗ್ರೆಸ್ 14 ಸ್ಥಾನ ಹೊಂದಿದ್ದು ಇದೀಗ ಇದರ ಜತೆಗೆ ಮತ್ತಷ್ಟು ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಯದ ಕಾರಣ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಸದಸ್ಯರನ್ನು ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕಳೆದ ತಿಂಗಳು ವಿಧಾನಪರಿಷತ್ ಚುನಾ ವಣೆಗೆ ಸಂಬಂಧಿಸಿದಂತೆ ಕ್ಷೇತ್ರಾವಾರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಇದೀಗ ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಕ್ಷೇತ್ರಾವಾರು ಸಭೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷವು ಪ್ರಸ್ತುತ ಬೀದರ್ ಕ್ಷೇತ್ರದಿಂದ ವಿಜಯ್‌ಸಿಂಗ್, ಬಿಜಾಪುರ ದ್ವಿಸದಸ್ಯ ಕ್ಷೇತ್ರದಿಂದ ಎಸ್.ಆರ್. ಪಾಟೀಲ್, ಸುನಿಲ್‌ಗೌಡ ಪಾಟೀಲ್, ಉತ್ತರ ಕನ್ನಡದಿಂದ ಶ್ರೀಕಾಂತ್ ಘೋಕ್ಲೃಕರ್, ಧಾರವಾಡದಿಂದ ಶ್ರೀನಿವಾಸ ಮಾನೆ, ಬಳ್ಳಾರಿಯಿಂದ ಕೊಂಡಯ್ಯ, ರಾಯಚೂರಿನಿಂದ ಬಸವರಾಜ ಪಾಟೀಲ್ ಇಟಗಿ, ಚಿತ್ರದುರ್ಗದಿಂದ ರಘು ಆಚಾರ್, ಶಿವಮೊಗ್ಗದಿಂದ ಪ್ರಸನ್ನಕುಮಾರ್, ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಿಂದ ಕೆ.ಪ್ರತಾಪಚಂದ್ರಶೆಟ್ಟಿ, ಹಾಸನದಿಂದ ಎಂ.ಎ.ಗೋಪಾಲಸ್ವಾಮಿ, ಬೆಂಗಳೂರು ಕ್ಷೇತ್ರದಿಂದ ಎಂ.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎಸ್.ರವಿ, ಮೈಸೂರು ಕ್ಷೇತ್ರದಿಂದ ಧರ್ಮಸೇನಾ ಸದಸ್ಯರಾಗಿದ್ದಾರೆ. ತುಮ ಕೂರಿನಿಂದ ಜೆಡಿಎಸ್‌ನಿಂದ ಗೆದ್ದಿದ್ದ ಬೆಮೆಲ್ ಕಾಂತರಾಜ್ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.