Advertisement

Uppala: ಸುಮಾರು 3.5 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ : ಬಂಧನ

08:43 PM Sep 20, 2024 | Team Udayavani |

ಉಪ್ಪಳ: ಉಪ್ಪಳ ಪತ್ವಾಡಿ ಕೊಂಡಾವೂರಿನ ಮನಯೊಂದರಿಂದ ಸುಮಾರು 3.5 ಕೋಟಿ ರೂ. ಮೌಲ್ಯದ ಅಮಲು ಪದಾರ್ಥವನ್ನು ಪೊಲೀಸರು ವಶಪಡಿಸಿಕೊಂಡು ಮನೆ ಮಾಲಕ ಅಸ್ಕರ್‌ ಅಲಿಯನ್ನು ಬಂಧಿಸಿದ್ದಾರೆ. ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್‌ ನೇತೃತ್ವದಲ್ಲಿ ಮೇಲ್ಪರಂಬ ಠಾಣೆ ಇನ್ಸ್‌ಪೆಕ್ಟರ್‌ ಎ. ಸಂತೋಷ್‌ ಕುಮಾರ್‌ ಅವರ ತಂಡ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಿದೆ.

Advertisement

ಕಳೆದ ಆ. 30ರಂದು ಮೇಲ್ಪರಂಬ ಕೈನೋತ್ತ್ ರಸ್ತೆಯಲ್ಲಿ 49.33 ಗ್ರಾಂ ಎಂ.ಡಿ.ಎಂ.ಎ. ಸಹಿತ ಅಬ್ದುಲ್‌ ರಹೀಂ ಯಾನೆ ರವಿಯನ್ನು ಪೊಲೀಸರು ಬಂಧಿಸಿದ್ದರು. ಈತನಿಂದ ಲಭಿಸಿದ ಮಾಹಿತಿಯಂತೆ ಉಪ್ಪಳದ ಪತ್ವಾಡಿಯ ಮನೆಗೆ ಡಿವೈಎಸ್‌ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದ ಮಧ್ಯಾಹ್ನ ಅಸ್ಕರ್‌ನನ್ನು ಮನೆಗೆ ಕರೆಯಿಸಿ ನಡೆಸಿದ ವಿಚಾರಣೆಯಲ್ಲಿ ಮನೆಯಲ್ಲಿ ಅಮಲು ಪದಾರ್ಥ ಸಂಗ್ರಹ ಇರಿಸಿದ ಮಾಹಿತಿ ಲಭಿಸಿತ್ತು.

ತಪಾಸಣೆ ಮಾಡಿದಾಗ ಕಾರ್ಡ್‌ ಬೋರ್ಡ್‌ ಪೆಟ್ಟಿಗೆಯಲ್ಲಿ ತುಂಬಿಸಿಟ್ಟಿದ್ದ ಸುಮಾರು ಮೂರು ಕಿಲೋ ಎಂ.ಡಿ.ಎಂ.ಎ., ಒಂದು ಕಿಲೋ ಗಾಂಜಾ ಪತ್ತೆ ಹಚ್ಚಲಾಯಿತು. ಪೇಸ್ಟ್‌ ರೂಪದಲ್ಲಿ ಅಮಲು ಪದಾರ್ಥದ ಔಷಧಗಳೂ, ಅಲ್ಲದೆ ಹಲವಾರು ಮತ್ತು ಬರಿಸುವ ಮಾತ್ರೆಗಳನ್ನು ಮನೆಯಿಂದ ಪತ್ತೆಹಚ್ಚಲಾಯಿತು. ಎಂಟು ವರ್ಷಗಳ ಹಿಂದೆ ಮನೆ ಖರೀದಿಸಿದವರು ಇತ್ತೀಚೆಗೆ ಈ ಮನೆಯನ್ನು ಕೇಂದ್ರೀಕರಿಸಿ ಅಮಲು ಪದಾರ್ಥ ವ್ಯವಹಾರ ನಡೆಸುತ್ತಿದ್ದಾರೆಂದು ಮಾಹಿತಿ ಲಭಿಸಿದೆ. ಈ ತಂಡದಲ್ಲಿ ನ್ನೂ ಹಲವರು ಇರುವುದಾಗಿ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next