Advertisement

Mangaluru: ಮಾದಕವಸ್ತು ಸಹಿತ ಮೂವರ ಬಂಧನ

08:59 PM Sep 18, 2024 | Team Udayavani |

ಮಂಗಳೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

Advertisement

ಮಂಗಳವಾರ ಮಧ್ಯಾಹ್ನ ಪೊಲೀಸರು ಮಾಲಾಡಿ ಕೋರ್ಟ್‌ ರಸ್ತೆ ಕಡೆಯಿಂದ ಗೋಲ್ಡ್‌ಫಿಂಚ್‌ ಮೈದಾನದ ಕಡೆಗೆ ಹೋಗುವ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಿಸಿದರು. ಆಗ ಅವರು ಗಾಂಜಾ ಮತ್ತು ಮೆಥಾಎಂಫ‌ಟಮೈನ್‌ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿರುವುದು ತಿಳಿದುಬಂತು.

ಕಾಸರಗೋಡಿನ ಮೇಘನಾಥ ಟಿ. (19), ಕೇರಳ ಕಯ್ಯೂರಿನ ಶ್ರೀಶಾಂತ್‌ (18) ಮತ್ತು ಸಯೂಜ್‌ ಎಂ. (20) ಬಂಧಿತರು. ಇವರಿಂದ 1.85 ಗ್ರಾಂ ಮೆಥಾಎಂಫ‌ಟಮೈನ್‌ ಮತ್ತು 58 ಗ್ರಾಂ ಗಾಂಜಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next