Advertisement

ಯುಪಿಐ ದಾಖಲೆ ವಹಿವಾಟು

03:35 AM Jan 02, 2019 | Team Udayavani |

ಹೊಸದಿಲ್ಲಿ: 2016ರ ಏಪ್ರಿಲ್‌ನಲ್ಲಿ ಪರಿಚಯಿಸಲಾದ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌(ಯುಪಿಐ) ಡಿಸೆಂಬರ್‌ ತಿಂಗಳಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಡಿಸೆಂಬರ್‌ನಲ್ಲಿ ಡಿಜಿಟಲ್‌ ಪಾವತಿ ಅಂದರೆ ಯುಪಿಐ ಮೂಲಕ ಬರೋಬ್ಬರಿ 62 ಕೋಟಿ ವಹಿವಾಟುಗಳು ನಡೆದಿದೆ.  ಈ ಸಮಯದಲ್ಲಿ ಬರೋಬ್ಬರಿ 1,02,594.82 ಕೋಟಿ ರೂ.ಗಳ ವ್ಯವಹಾರಗಳು ನಡೆದಿದ್ದು, ಇಷ್ಟೊಂದು ವಹಿವಾಟು ನಡೆದಿದ್ದು ಇದೇ ಮೊದಲು ಎಂದು ಹೇಳಲಾಗಿದೆ.

Advertisement

ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ವಹಿವಾಟಿನ ಪ್ರಮಾಣ ಶೇ.18ರಷ್ಟು ಏರಿಕೆಯಾಗಿದ್ದು, ವಹಿವಾಟಿನ ಮೊತ್ತದಲ್ಲಿ ಶೇ.24ರಷ್ಟು ಹೆಚ್ಚಳವಾಗಿದೆ. 2016ರ ಏಪ್ರಿಲ್‌ ನಂತರ ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗೂ ಮೀರಿ ವಹಿವಾಟು ನಡೆದಿದೆ. 

ಯುಪಿಐ ಮಾತ್ರವಲ್ಲದೆ, ಐಎಂಪಿಎಸ್‌ ವಹಿವಾಟಿನ ಪ್ರಮಾಣವೂ ಡಿಸೆಂಬರ್‌ನಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next