ಮಂಗಳೂರು: ನಾಗಾರಾಧನೆ ಮತ್ತು ದೈವಾರಾಧನೆಯ ಮೂಲಸ್ಥಾನಗಳ ಶಕ್ತಿಗಳ ಆರಾಧನೆಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಈ ಆರಾಧನೆಯಿಂದ ದೈವ-ದೇವರ ಅನುಗ್ರಹ ಮಾತ್ರವಲ್ಲದೆ ದೂರವಾಗುತ್ತಿರುವ ಸಂಬಂಧಗಳ ಮೌಲ್ಯ ಮತ್ತಷ್ಟು ಬೆಸುಗೆಯಾಗಲು ಸಾಧ್ಯವಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ನೀರುಮಾರ್ಗ ದೇವಸ ಬ್ರಹ್ಮಸ್ಥಾನದಲ್ಲಿ ಬಂಜನ್ ಕುಟುಂಬಿಕರಿಂದ ನಾಗಮಂಡಲದ ಸಂದರ್ಭ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರಿ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಸತತ ದೇವತಾ ಕಾರ್ಯ,ದೈವಾರಾಧನೆಯಿಂದ ನಮ್ಮ ಕನಸುಗಳು ಕೈಗೂಡಲು ಸಾಧ್ಯವಿದೆ. ಕುಟುಂಬದ ಮನೆಯಲ್ಲಿ ದೇವರ ಮುಡಿಪು ಗಂಟು ಮತ್ತು ವರ್ಷಕ್ಕೊಮ್ಮೆ ನಾಗ ಸನ್ನಿಧಾನದಲ್ಲಿ ಸೇವೆ ಮಾಡುವಲ್ಲಿ ನಿರ್ಲಕ್ಷé ಬೇಡ. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಹೋಗುವಾಗ ಮಕ್ಕಳನ್ನು ಕರೆದುಕೊಂಡು ಹೋಗುವ ಮೂಲಕ ಮುಂದಿನ ಪೀಳಿಗೆಗೆ ಇದರ ಮಹತ್ವವನ್ನು ತಿಳಿಹೇಳುವ ಕೆಲಸ ಮಾಡೋಣ ಎಂದರು.
ವಿದ್ವಾನ್ ಸೋಂದಾ ಭಾಸ್ಕರ್ ಭಟ್ ಧಾರ್ಮಿಕ ಉಪನ್ಯಾಸ ಮಾಡಿದರು. ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಮುಂಬಯಿ ಕುಲಾಲ ಸಂಘದ ಗಿರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ, ಬೊಳಾ¾ರಗುತ್ತು ಶ್ರೀನಿವಾಸ ತಂತ್ರಿ, ಸಗ್ರಿ ಗೋಪಾಲಕೃಷ್ಣ ಸಾಮಗ, ಲಕ್ಷ್ಮೀನಾರಾಯಣ ಭಟ್ ಮಾಣೂರು, ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ರವಿ ಎನ್., ಸಚಿವ ರಮಾನಾಥ ರೈ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಜಿ.ಪಂ. ಉಪಾಧ್ಯಕ್ಷ ಕಸ್ತೂರಿ ಪಂಜ, ಕುಲಾಲರ ಮಹಾಸಂಘದ ಕಾರ್ಯಾಧ್ಯಕ್ಷ ಅಣ್ಣಯ್ಯ ಕುಲಾಲ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಪೃಥ್ವಿರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ನ್ಯಾಯವಾದಿ ರಾಮಪ್ರಸಾದ್ ಎಸ್., ದ.ಕ. ಕುಲಾಲ ಸಂಘದ ಅಧ್ಯಕ್ಷ ಎ.ಎನ್. ಕುಲಾಲ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ತೇಜಸ್ವಿರಾಜ್, ಕಂಟ್ರಾಕ್ಟರ್ ಮಹಾಬಲ ಕೊಟ್ಟಾರಿ, ಪ್ರಗತಿಪರ ಕೃಷಿಕ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಕರ್ನಾಟಕ ಸಹಕಾರ ಒಕ್ಕೂಟ ಮಹಾಮಂಡಳಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಅಡ್ಯಾರ್, ಸುರೇಶ್ ಕುಲಾಲ್, ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಆನಂದ್ ಸಾಲಿಯಾನ್, ಗ್ರಾ.ಪಂ. ಸದಸ್ಯ ಚೇತನ್ ನಟ್ಟಿಲ್ಲು, ನೀರುಮಾರ್ಗ ಕುಲಾಲ ಸಂಘದ ಅಧ್ಯಕ್ಷ ಮಹಾಬಲ ಕುಲಾಲ್, ಜಿ.ಪಂ. ಮಾಜಿ ಸದಸ್ಯ ಮೆಲ್ವಿನ್ ಡಿ’ಸೋಜಾ, ನಾಗಬ್ರಹ್ಮಸ್ಥಾನದ ಅಧ್ಯಕ್ಷ ರಾಜ್‌ಕುಮಾರ್ ಬಿ.ಸಿ.ರೋಡ್, ಗೌರವಾಧ್ಯಕ್ಷ ಗೋಪಾಲ ಮೂಲ್ಯ ದೊಡ್ಡಮನೆ, ಕೋಶಾಧಿಕಾರಿ ಯಶೋಧರ ಪೊಳಲಿ, ಕಾರ್ಯದರ್ಶಿ ರಾಜೇಶ್ ಶಿಬರೂರು, ಗೌರವ ಸಲಹಾ ಸಮಿತಿಯ ಮಹಾಬಲ ಕುಲಾಲ್ ಉಪಸ್ಥಿತರಿದ್ದರು. ನಾಗಮಂಡಲದ ಯಶಸ್ಸಿಗೆ ಸಹಕರಿಸಿದ ದಾನಿಗಳು, ಗಣ್ಯರನ್ನು ಸಮ್ಮಾನಿಸಲಾಯಿತು. ನಾಗೇಶ್ ಪ್ರಸ್ತಾವನೆಗೈದರು. ಲಕ್ಷಣ್ ಬಿ.ವಿ. ಏಳಿಂಜೆ ಸ್ವಾಗತಿಸಿದರು. ಬಾಲಕೃಷ್ಣ ವಾಮಂಜೂರು ವಂದಿಸಿದರು.
ತುಳುನಾಡಿನಲ್ಲಿ ಪ್ರತಿ ಕುಟುಂಬ ವರ್ಷಕ್ಕೊಮ್ಮೆ ನಾಗಮೂಲಸ್ಥಾನ,ದೈವ ಮೂಲಸ್ಥಾನಕ್ಕೆ ತೆರಳಿ ಸೇವೆ ಮಾಡಿದರೆ ಅದೇ ಕುಟುಂಬಕ್ಕೆ ದೈವ-ದೇವರ ದೊಡ್ಡ ಅನುಗ್ರಹ. ಇದನ್ನು ನಿರ್ಲಕ್ಷé ಮಾಡಿದರೆ ಮುಂದೊಂದು ದಿನ ಪೀಳಿಗೆಯನ್ನು ಅದು ಕಾಡಲಿದೆ. ತುಳುನಾಡಿನಲ್ಲಿ ನಾಗಾರಾಧನೆಗೆ ವಿಶಿಷ್ಟವಾದ ಶಕ್ತಿಯಿದ್ದು, ಈ ಮೂಲಕ ಭಕ್ತರ ಇಷ್ಟಾರ್ಥ ಸಿದ್ಧಿಸಲು ಸಾಧ್ಯವಿದೆ.
– ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ