Advertisement

ಉಪೇಂದ್ರ ಹೊಸ ಪಕ್ಷ ಲೋಕಾರ್ಪಣೆ

11:54 AM Sep 19, 2018 | |

ಉಪೇಂದ್ರ ಅವರ ಹುಟ್ಟುಹಬ್ಬದ ಅಂಗವಾರಿ ಮಂಗಳವಾರ (ಸೆಪ್ಟೆಂಬರ್‌ 18)ರಂದು ಅವರ ಹೊಸ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷವು ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

ಕಳೆದ ವರ್ಷ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಎಂಬ ಪಕ್ಷದಿಂದ ರಾಜಕೀಯ ಪ್ರವೇಶ ಮಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು. ಆದರೆ, ಅದಾಗಿ ಕೆಲವು ತಿಂಗಳುಗಳ ಅಂತರದಲ್ಲಿ, ಉಪೇಂದ್ರ ಅವರ ಆಂತರಿಕ ಭಿನ್ನಾಭಿಪ್ರಾಯದಿಂದ ಕೆಪಿಜೆಪಿಯಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದರು.

ವಿಧಾನಸಭಾ ಚುನಾವಣೆಗಳಿಂದ ದೂರವೇ ಉಳಿದಿದ್ದ ಉಪೇಂದ್ರ, ಕೊನೆಗೆ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ತಮ್ಮ ಹುಟ್ಟುಹಬ್ಬವಾದ ಮಂಗಳವಾರದಂದು ಅಧಿಕೃತವಾಗಿ ಪಕ್ಷದ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ತಮ್ಮ ಹೊಸ ಪಕ್ಷವು ಕಾರ್ಯನಿರ್ವಹಿಸಲಿದೆ ಎಂದ ಅವರು, “ನನ್ನ ಎಲ್ಲಾ ಕಲ್ಪನೆಗಳು ಕಾರ್ಯರೂಪಕ್ಕೆ ಬರುತ್ತವೆ ಎಂದು ಹೇಳುತ್ತಿಲ್ಲ. ಹಾಗಂತ ನಾನು ಪ್ರಯತ್ನಿಸದೇ ಇರುವುದಿಲ್ಲ.

ನಮ್ಮ ಪಕ್ಷ ಸೇರಬಯಸುವವರು ತಮ್ಮ ಕ್ಷೇತ್ರಗಳ ಸಮಸ್ಯೆಗಳು, ಅವುಗಳನ್ನು ಬಗೆಹರಿಸುವ ವಿಧಾನಗಳು, ತಗಲುವ ವೆಚ್ಚದ ಬಗ್ಗೆ ವೀಡಿಯೋ ಮಾಡಿ ಯುಪಿಪಿ ವೆಬ್‌ಸೈಟ್‌ಗೆ ಕಳುಹಿಸಬೇಕು. ನಮಗೆ ಬಂದ ಮಾಹಿತಿಯನ್ನು ಪಕ್ಷದ ಕಾರ್ಯಕರ್ತರ ಜೊತೆಗೆ ಚರ್ಚಿಸಿ, ಅಭ್ಯರ್ಥಿಗಳನ್ನು ಲಿಖೀತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ’ ಎಂದು ಉಪೇಂದ್ರ ಈ ಸಂದರ್ಭದಲ್ಲಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next