Advertisement

ಕರ್ನಾಟಕ ಪ್ರಜ್ಞಾವಂತರ ಜನತಾಪಕ್ಷ ಘೋಷಿಸಿದ ಉಪೇಂದ್ರ

11:59 AM Nov 01, 2017 | |

ಬೆಂಗಳೂರು: ಸೂಪರ್‌ ಸ್ಟಾರ್‌ ಖ್ಯಾತಿಯ ನಟ ಉಪೇಂದ್ರ ಅವರ ಬಹು ನಿರೀಕ್ಷಿತ ಹೊಸ ರಾಜಕೀಯ ಪ್ರಯೋಗ “ಕರ್ನಾಟಕ ಪ್ರಜ್ಞಾವಂತರ ಜನತಾಪಕ್ಷ’ (ಕೆಪಿಜೆಪಿ) ಘೋಷಣೆಯಾಗಿದ್ದು, ಇದು ಪ್ರಜ್ಞಾವಂತರಿಗೆ ಮಾತ್ರ. ಅಷ್ಟೇ ಅಲ್ಲ, ಕೆಪಿಜೆಪಿ ಸೇರುವವರು ಜನಸೇವೆ, ಅಭಿವೃದ್ಧಿ ಕುರಿತು ಒಂದು “ಐಡಿಯಾ’ ಹೊಂದಿರಬೇಕು.

Advertisement

ನಗರದ ಗಾಂಧಿಭವನದಲ್ಲಿ ಹೊಸ ರಾಜಕೀಯ ಪಕ್ಷದ ಹೆಸರು ಘೋಷಣೆ ಮಾಡಿದ ಉಪೇಂದ್ರ, ಪಕ್ಕಾ ಸಿನಿಮಾ ಸ್ಟೈಲ್‌ನಲ್ಲೇ ಡೈಲಾಗ್‌ ಡೆಲಿವರಿ ಮಾಡುವ ಮೂಲಕ ತಮ್ಮ ಕನಸನ್ನು ಹಂಚಿಕೊಂಡರು.  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಬಯಸಿರು ವು ದಾಗಿ ತಿಳಿಸಿದ ಉಪೇಂದ್ರ, ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆದಿದ್ದು, ಜನರ ತೀರ್ಮಾನದಂತೆ ಸ್ಪರ್ಧೆ ನಿರ್ಧಾರವಾಗಲಿದೆ. ನವೆಂಬರ್‌ 10ರೊಳಗೆ ಪಕ್ಷದ ಧ್ಯೇಯ, ಸಿದ್ಧಾಂತ, ಉದ್ದೇಶಗಳನ್ನು ವಿವರಿಸುವ “ಆ್ಯಪ್‌’ ಸಿದ್ಧಗೊಳ್ಳಲಿದ್ದು, ವೆಬ್‌ಸೈಟ್‌ ಸಹ ಪ್ರಾರಂಭವಾಗಲಿದೆ. ಸದ್ಯದಲ್ಲೇ ಚುನಾವಣಾ ಆಯೋಗದ ಮುಂದೆ ಚಿಹ್ನೆಗೂ ಅವಕಾಶ ಕೋರಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.

“ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಸಾಕಷ್ಟು ಚರ್ಚೆ ಮಾಡಿ ಆ ಕ್ಷೇತ್ರದ ಸಮಸ್ಯೆ ಅರಿತಿರುವ ಹಾಗೂ ಕೆಲಸ ಮಾಡಲು ಶುದ್ಧ ಮನಸ್ಸಿನಿಂದ ಇರುವವರಿಗೆ ಅವಕಾಶ ಕೊಡಲಾಗುವುದು. ನನಗೆ ಸಮಾಧಾನವಾಗದಿದ್ದರೆ ಚುನಾವಣೆಗೆ ಸ್ಪರ್ಧೆ ಮಾಡಲು ಒಪ್ಪುವುದೇ ಇಲ್ಲ. ಕಾವೇರಿ, ಮಹದಾಯಿ, ಗಡಿ ವಿಚಾರಗಳು ಸೂಕ್ಷ್ಮ. ಅದನ್ನು ಇತರ ವಿಚಾರಗಳಂತೆ ಭಾವನಾತ್ಮಕವಾಗಿ ಜನರನ್ನು ಉದ್ರೇಕಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ನಮ್ಮ ನಿರೀಕ್ಷೆ ಸುಳ್ಳಾದರೆ ಬೇಸರ ಪಟ್ಟುಕೊಳ್ಳುವುದಿಲ್ಲ. ಮತ್ತೆ ಐದು ವರ್ಷ ಕಾಯಲು ನಾನು ಸಿದ್ಧ’ ಎಂದರು. ಪತ್ನಿ ಪ್ರಿಯಾಂಕ, ಸಹೋದರ ಸುರೇಂದ್ರ, ನಟ ಕುಮಾರ್‌ ಗೋವಿಂದ್‌, ಸಂಗೀತ ನಿರ್ದೇಶಕ ಗುರುಕಿರಣ್‌, ಕೆಎಂಎಫ್ ನಿವೃತ್ತ ಎಂಡಿ ಪ್ರೇಮ್‌ನಾಥ್‌ ಸಭೆಯಲ್ಲಿ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಹಾಜರಿದ್ದ ಮಾಧ್ಯಮ ದವರಿಂದಲೇ ಜ್ಯೋತಿ ಬೆಳಗಿಸಿದರು.

“ಖಾಕಿ ಶರ್ಟ್‌’, “ಸಂಪೂರ್ಣ ಬದಲಾವಣೆ’ ಘೋಷಣೆ
ಉಪೇಂದ್ರ ಅಭಿಮಾನಿಗಳು, ಕೆಪಿಜೆಪಿ ಕಾರ್ಯಕರ್ತರು ಖಾಕಿ ಶರ್ಟ್‌ ತೊಟ್ಟು, ಸಂಪೂರ್ಣ ಬದಲಾವಣೆ ಘೋಷಣಾ ಫ‌ಲಕವನ್ನು ಕೈಯಲ್ಲಿ ಹಿಡಿದಿದ್ದರು. ಉಪೇಂದ್ರ ಅವರ ತಾಯಿ ಹಾಗೂ ಪತ್ನಿ ಸಹ ಖಾಕಿ ಶರ್ಟ್‌ ತೊಟ್ಟಿದ್ದರು. ಖ್ಯಾತ ಕಲಾವಿದ ವಿಲಾಸ್‌ ನಾಯಕ್‌ ನೂತನ ಪಕ್ಷದ ಧ್ಯೇಯ ಕುರಿತು ಕ್ಯಾನ್‌ ವಾಸ್‌ ಮೇಲೆ ವರ್ಣಚಿತ್ರ ರಚಿಸಿ ಪ್ರಜೆಗಳ ಪ್ರತಿಬಿಂಬ ವಿಧಾನಸೌಧದಲ್ಲಿ ಕಾಣಬೇಕು. ಕನ್ನಡ ಬಾವುಟ, ಆಟೋ, ರೈತ, ಹಸು, ಕಚೇರಿಗೆ ಹೊರಟ ಉದ್ಯೋಗಿ ಒಳಗೊಂಡ ಚಿತ್ರ ಕರ್ನಾಟಕದ ಸಮಗ್ರ ಚಿತ್ರಣ ನೀಡುತ್ತದೆ ಎಂದರು.

ಸ್ವಚ್ಛ ಭಾರತ್‌ ಪ್ರಸ್ತಾಪ
ಪ್ರಧಾನಿ ನರೇಂದ್ರ ಮೋದಿಯವರ “ಸ್ಮಾರ್ಟ್‌ ಸಿಟಿ’ ಹಾಗೂ “ಸ್ವಚ್ಛ ಭಾರತ್‌’ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಉಪೇಂದ್ರ, ಸ್ಮಾರ್ಟ್‌ ಸಿಟಿ ಬದಲು ಸ್ಮಾರ್ಟ್‌ ವಿಲೇಜ್‌ ಪರಿಕಲ್ಪನೆ ನಮ್ಮದು. ಸ್ವಚ್ಛ ಭಾರತ್‌ ಒಳ್ಳೆಯ ಕಾರ್ಯಕ್ರಮ ಅದೇ ರೀತಿ ಮತ್ತಷ್ಟು ಜನಸ್ನೇಹಿ, ಜನಪರ ಕಾರ್ಯಕ್ರಮಗಳು ಪರಿಣಾಮಕಾರಿ ಜಾರಿ ಅಗತ್ಯ ಎಂದು ಪ್ರತಿಪಾದಿಸಿದರು. 

Advertisement

ಕೆಪಿಜೆಪಿ ಉಪೇಂದ್ರ ನೋಂದಣಿ ಮಾಡಿಸಿದ್ದಲ್ಲ
ಕೆಪಿಜೆಪಿ, ಉಪೇಂದ್ರ ಅವರು ನೋಂದಣಿ ಮಾಡಿಸಿದ್ದಲ್ಲ. ಮಹೇಶ್‌ ಗೌಡ ಹಾಗೂ ಸ್ನೇಹಿತರು ನೋಂದಣಿ ಮಾಡಿಸಿರುವುದು. ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪನೆ ಮಾಡುವ ಘೋಷಣೆ ಮಾಡಿದ ನಂತರ ಅವರನ್ನು ಭೇಟಿ ಯಾಗಿ ಇದೇ ಪಕ್ಷವನ್ನು ಮುನ್ನಡೆಸಿ ನಾವು ನಿಮ್ಮೊಂದಿಗಿರುತ್ತೇವೆ ಎಂದು ಹೇಳಿ ಉಪೇಂದ್ರ ಅವರ ಕೈಗಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next