ಬೆಂಗಳೂರು : ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು, ನಾನು ಚುನಾವಣೆಗೆ ನಿಲ್ಲಬೇಕೆಂದು ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ. ಈ ಮೊದಲಿನಿಂದಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡು ಬಂದಿರುವ ಅವರು, ಇದೀಗ ಏಕಾಏಕಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದ್ಯಾಕೆ ? ಅಷ್ಟಕ್ಕೂ ಉಪೇಂದ್ರ ಹೇಳಿರುವುದು ಏನು ? ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ಈ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ,,ಸಮಾಜ ಸೇವೆ ಮಾಡ್ತಿದ್ದೀನಿ. ರೈತರಿಂದ ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚಿದ್ತಿನಿ. ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ. ಆಡಳಿತ, ವಿಪಕ್ಷ ಜನರಿಗೆ ಏನೂ ಮಾಡ್ದೆ ಸಂಪೂರ್ಣ ವಿಫಲ ಆಗಿದೆ ಅಂತಾ ಮಾಧ್ಯಮದಲ್ಲಿ ಕೂಗಿ ಹೇಳ್ತಿನಿ. ಇವರನೆಲ್ಲಾ ಕಿತ್ತಾಕಿ ನನಗೆ ಒಂದು ಅವಕಾಶ ಕೊಡಿ.
ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ಕೆಲಸ ಮಾಡ್ತಿನಿ. ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ. ನನ್ನನ್ನು ಗೆಲ್ತಿಸ್ತೀರಾ? ಎಂದು ಕೇಳಿಕೊಂಡಿದ್ದಾರೆ. ಇಷ್ಟು ಹೇಳಿರುವ ಉಪೇಂದ್ರ ಅವರು ನಾನೂ ಎಲೆಕ್ಷನ್ ಗೆ ನಿಲ್ಲಲ್ಲ ಎಂದಿದ್ದಾರೆ. ಈ ಬಗ್ಗೆ ಹೇಳಿಕೊಂಡಿರುವ ಅವರು, ನಾನು ಎಲೆಕ್ಷನ್ ಗೆ ನಿಲ್ಲಲ್ಲ. ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೇ ? ಅಂತ ಕೇಳ್ತೀರಾ ? ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿರೋರು ಫೇಮಸ್ ವ್ಯಕ್ತಿಗಳು ಮೇಲೆ ಹೇಳಿದ ಯಾವ ಕ್ವಾಲಿಟೀ ಇರೋ ನಾಯಕರು ನಿಲ್ಲಲ್ಲ, ದೊಡ್ಡ ನಾಯಕರನ್ನ ಕೊಡೋದು ರಾಜಕೀಯ ! ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೊ ಸಾಮಾನ್ಯರು ಚುನಾವಣೆಗೆ ನಿಲ್ತಾರೆ.,ಬರೀ ಪ್ರಜಾಕೀಯ ವಿಚಾರ ತಳ್ಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡ್ತಾರೆ.
ಪ್ರಜಾಕೀಯದ ( SOP ) ಕಾರ್ಯವೈಖರಿ ತರ ಕೆಲಸ ಮಾಡ್ಲಿಲ್ಲ , ನಿಮಗೆ ಅವನ/ಅವಳ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ C M ಆಗಿ ನಿಮ್ ಜೊತೆ ನಿಲ್ತೀನಿ, ನಿಮ್ ಜೊತೆ ಉಗ್ರ ಹೋರಾಟ ಮಾಡಿ, ಅಂತಾ ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ. ಈ ವ್ಯವಸ್ಥೆ ಸರೀ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು/ ಅವಳು ಕೆಳಗಿಳೀಬೇಕು ಅಂತಾ ಕಾನೂನು ಬರ್ಬೇಕು. ಅದಕ್ಕೆ ನಿಮ್ ಜೊತೆ ನಾನು ಯಾವಾಗ್ಲೂ ಇರೋ permanent C M ( ಕಾಮನ್ ಮೆನ್ ) ಜನ ಸಾಮಾನ್ಯ … ? ಇಲ್ಲ ಇಲ್ಲ …. ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ. ಸರೀನಾ ? ಎಂದು ತಮ್ಮದೇ ಶೈಲಿಯಲ್ಲಿ ಘೋಷಿಸಿಕೊಂಡಿದ್ದಾರೆ.