ಉಪೇಂದ್ರ ನಾಯಕರಾಗಿರುವ, ಆರ್. ಚಂದ್ರು ನಿರ್ದೇಶನದ “ಐ ಲವ್ ಯು’ ಚಿತ್ರಕ್ಕೆ ಕಳೆದ ತಿಂಗಳೇ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತವಾಗಿತ್ತು. ಇನ್ನು ಜೂನ್ 10ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದು ಹೇಳಲಾಗಿತ್ತು. ಸ್ವಲ್ಪ ವಿಳಂಬವಾಗಿ, ಮೊನ್ನೆ
ಸೋಮವಾರದಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ.
ಒಂದು ಭರ್ಜರಿ ಫೈಟ್‌ನ ಚಿತ್ರೀಕರಣದಿಂದಲೇ ಚಿತ್ರವನ್ನು ಪ್ರಾರಂಭಿಸಿದ್ದಾರೆ ಚಂದ್ರು. ಹೌದು, “ಐ ಲವ್ ಯೂ’ ಚಿತ್ರಕ್ಕಾಗಿ ಸೋಮವಾರದಿಂದ ಬೆಂಗಳೂರಿನ ಸಪೋಟ ಗಾರ್ಡನ್‌ನಲ್ಲಿ ಹೊಡೆದಾಟದ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದ್ದು, ಉಪೇಂದ್ರ ಮತ್ತು ಫೈಟರ್‌ಗಳು ಈ ಹೊಡೆದಾಟದ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಪೋಟ ಗಾರ್ಡನ್ ಅಲ್ಲದೆ, ನೈಸ್ ರಸ್ತೆಯಲ್ಲೂ ಚಿತ್ರೀಕರಣ ಮುಂದುವರೆಯಲಿದೆ.
ಹೆಲಿಕಾಫ್ಟರ್ ಸನ್ನಿವೇಶಗಳನ್ನು ನೈಸ್ ರಸ್ತೆಯಲ್ಲಿ ಇಂದಿನಿಂದ ಚಿತ್ರೀಕರಿಸಲಾಗುತ್ತದೆ. “ಐ ಲವ್ ಯೂ’ ಚಿತ್ರವು “ಎ’, “ಉಪೇಂದ್ರ’ ಹಾಗೂ “ಪ್ರೀತ್ಸೆ’ ಶೈಲಿಯ ಲವ್‌ಸ್ಟೋರಿಯಾಗಿದ್ದು, ಉಪೇಂದ್ರ ಅವರ ಪಾತ್ರ ಕೂಡಾ ವಿಭಿನ್ನವಾಗಿದೆಯಂತೆ.
ಉಪೇಂದ್ರ ಈ ಹಿಂದೆ ತಮ್ಮ “ಎ’ ಸಿನಿಮಾದಲ್ಲಿ, “ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದೆ°àಕಾಯಿ’ ಎಂದಿದ್ದರು. ಆದರೆ, ಈಗ 15 ವರ್ಷಗಳ ನಂತರ ಉಪೇಂದ್ರ ಅವರು, ಅದೇ ಪ್ರೀತಿ ಬಗ್ಗೆ ಹೊಸ ಅಂಶವನ್ನು ಹೇಳಲಿದ್ದಾರಂತೆ. ಚಿತ್ರದಲ್ಲಿ ಉಪೇಂದ್ರಗೆ ನಾಯಕಿ ಯಾಗಿ ರಚಿತಾ ರಾಮ್ ನಟಿಸುತ್ತಿದ್ದು, ಜೊತೆಗೆ ಪ್ರದೀಪ್ ರಾವತ್, ಶಯ್ನಾಜಿ ಶಿಂಧೆ, ರವಿಕಾಳೆ, ರವಿಶಂಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ
ನವೀನ್ ಕುಮಾರ್ ಛಾಯಾಗ್ರಹಣ, ಕಿರಣ ತೊಟಮ್‌ಬೈಲು ಸಂಗೀತವಿದೆ.