ಬೆಂಗಳೂರು: ಕನ್ನಡ ಚಿತ್ರರಂಗದ ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರಾದ ರಿಯಲ್ ಸ್ಟಾರ್ ನಟ ಉಪೇಂದ್ರ ಅವರು ಇದೀಗ ಮತ್ತೊಮ್ಮೆ ನಿರ್ದೇಶಕನ ಟೋಪಿ ಧರಿಸಿದ್ದು, ಸಿನಿಮಾ ಟೈಟಲ್ ನಲ್ಲಿಯೇ ಪ್ರೇಕ್ಷಕರ ತಲೆಗೆ ಹುಳು ಬಿಟ್ಟಿದ್ದಾರೆ.
ಉಪೇಂದ್ರ ಸಿನಿಮಾಗಳಂದ್ರೆನೆ ಹಾಗೇ. ಟೈಟಲ್ ನಿಂದ ಹಿಡಿದು ಕ್ಲೈಮ್ಯಾಕ್ಸ್ ವರೆಗೂ ಎಲ್ಲವೂ ಡಿಫ್‍ರೆಂಟ್. ಇದು ಇದೀಗ ಮತ್ತೊಮ್ಮೆ ಸಾಬೀತು ಆಗುತ್ತಿದ್ದು, ಇಂದು ರಿಲೀಸ್ ಆಗಿರುವ ಹೊಸ ಚಿತ್ರದ ಟೈಟಲ್ ಪೋಸ್ಟರ್ ಅಭಿಮಾನಿಗಳ ತಲೆಗೆ ಕೆಲಸ ಹಚ್ಚಿದೆ.
ಸಿನಿಮಾ ಟೈಟಲ್ ಏನು ಎಂದು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಮೂರು ನಾಮ ಹಾಗೂ ಉಪೇಂದ್ರ ಅವರು ಭಾವಚಿತ್ರವಿರುವ ಪೋಸ್ಟರ್ ಬಿಡುಗಡೆಯಾಗಿದೆ.
ಈ ಹಿಂದೆ ʻಎʼ, ʻಶ್!ʼ, ʻಓಂʼ, ʻH2Oʼ, ಸೂಪರ್’ ನಂತಹ ಭಿನ್ನ ಟೈಟಲ್‌ಗಳಿರುವ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದ ಉಪೇಂದ್ರ, ಈಗಲೂ ಅದೇ ರೀತಿಯ ಟ್ರಿಕ್ಸ್ ಅನ್ನು ಹೊಸ ಸಿನಿಮಾದ ಟೈಟಲ್‌ಗೂ ಬಳಸಿದ್ದಾರೆ.
ಇನ್ನು ಉಪೇಂದ್ರ ಅವರು ‘ಉಪ್ಪಿ 2’ ಸಿನಿಮಾ ಬಳಿಕ ಮತ್ತೊಮ್ಮೆ ನಿರ್ದೇಶನಕ್ಕೆ ಇಳಿದಿದ್ದು, ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಈ ಹೊಸ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲವೂ ಉಪೇಂದ್ರ ಅವರದ್ದೇ ಆಗಿದೆ.
ಶುರುವಾದ ವಿಶ್ಲೇಷಣೆ :
ಇನ್ನು ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ವಿಶ್ಲೇಷಣೆಗಳು ಜೋರಾಗಿ ನಡೆದಿವೆ. ಸೋಷಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ಟೈಟಲ್ ಗಳನ್ನು ಸಿನಿ ಪ್ರೇಮಿಗಳು ಹಂಚಿಕೊಳ್ಳುತ್ತಿದ್ದಾರೆ.