Advertisement

ಹೋಮ್‌ ಮಿನಿಸ್ಟರ್‌ ಹಾಡು ಹಬ್ಬ!

11:25 AM Mar 23, 2022 | Team Udayavani |

ಉಪೇಂದ್ರ ನಾಯಕರಾಗಿರುವ “ಹೋಮ್‌ ಮಿನಿಸ್ಟರ್‌’ ಚಿತ್ರ ಏ.01ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆದಿದೆ. ಸಚಿವ ಮುನಿರತ್ನ ನಾಯ್ಡು,ಗೋಲ್ಡನ್‌ ಸ್ಟಾರ್‌ ಗಣೇಶ್‌ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇನ್ನು, ಚಿತ್ರದ ಬಿಡುಗಡೆ ಹಾಗೂ ಸಿನಿಮಾದ ಬಗ್ಗೆ ಮಾತನಾಡುವ ಉಪೇಂದ್ರ, “ಇದು ನಾನು ಈವರೆಗೂ ಮಾಡಿರದ ಪಾತ್ರ. ಇಲ್ಲಿನ ನಿರ್ಮಾಪಕರು ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Advertisement

ಇನ್ನೂ ನೂರು ಜನ ತೆಲುಗಿನ ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು’ ಎಂದರು. ಚಿತ್ರದಲ್ಲಿ ವೇದಿಕಾ ನಾಯಕಿಯಾಗಿ ನಟಿಸಿದ್ದಾರೆ. ಇಲ್ಲಿ ಅವರು ಜರ್ನಲಿಸ್ಟ್‌ ಆಗಿ ನಟಿಸಿದ್ದಾರಂತೆ. ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್‌ ವೀರಮಾಚನೆನಿ ಚಿತ್ರ ಮೂಡಿಬಂದ ಬಗ್ಗೆ ವಿವರಿಸಿದರು. ಈ ಚಿತ್ರವನ್ನು ಸುಜಯ್‌ ಕೆ ಶ್ರೀಹರಿ ನಿರ್ದೇಶನ ಮಾಡಿದ್ದು, ಜಿಬ್ರಾನ್‌ ಸಂಗೀತವಿದೆ. ಕರ್ನಾಟಕದಾದ್ಯಂತ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹೋಮ್‌ ಮಿನಿಸ್ಟರ್‌ ಚಿತ್ರವನ್ನು ಶ್ರೇಯಾ ಚಿತ್ರ ಮೂಲಕ ಬೆಂಗಳೂರು ಕುಮಾರ್‌ ಫಿಲಂಸ್‌ ಸಂಸ್ಥೆ ಬಿಡುಗಡೆ ಮಾಡುತ್ತಿರುವುದಾಗಿ ಬೆಂಗಳೂರು ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next