Advertisement

ಉಪ್ಪಿ ಮೊಗದಲ್ಲಿ ಮಿಲಿಯನ್‌ ನಗು:  ಟ್ವಿಟ್ಟರ್‌ನಲ್ಲಿ ರಿಯಲ್‌ ರೆಕಾರ್ಡ್‌

07:02 AM May 28, 2021 | Team Udayavani |

ಸ್ಯಾಂಡಲ್‌ವುಡ್‌ನ‌ಲ್ಲಿ ನಟ ಕಂ ನಿರ್ದೇಶಕ ರಿಯಲ್‌ ಸ್ಟಾರ್‌ ಉಪೇಂದ್ರ ತಮ್ಮ ಸಿನಿಮಾಗಳ ಮೂಲಕ ಹಲವು ದಾಖಲೆಗಳನ್ನು ಮಾಡಿರುವುದು ನಿಮಗೆ ಗೊತ್ತೇ ಇದೆ. ಈಗ ಅದೇ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲೂ ಹೊಸ ದಾಖಲೆ ಬರೆದಿದ್ದಾರೆ.

Advertisement

ಹೌದು, ಸಿನಿಮಾ ಜೊತೆಗೆ ಪ್ರಜಾಕೀಯದ ಚಟುವಟಿಕೆಯಲ್ಲೂ ಸಕ್ರೀಯರಾಗಿರುವ ಉಪೇಂದ್ರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲೂ ತುಂಬ ಆ್ಯಕ್ಟೀವ್‌ ಆಗಿದ್ದಾರೆ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಮಾಜಿಕ ತಾಣಗಳನ್ನು ಸಮರ್ಥ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉಪೇಂದ್ರ ಅವರನ್ನ ಫಾಲೋ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಇದೀಗ ರಿಯಲ್‌ ಸ್ಟಾರ್‌ ಉಪೇಂದ್ರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ 10 ಲಕ್ಷ (1 ಮಿಲಿಯನ್‌) ಫಾಲೋವರ್ ಹೊಂದುವ ಮೂಲಕ ಟ್ವಿಟ್ಟರ್‌ನಲ್ಲಿ ಅತಿಹೆಚ್ಚು ಫಾಲೋವರ್ ಹೊಂದಿರುವ ಎರಡನೇ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಸೋಶಿಯಲ್‌ ಮೀಡಿಯಾವಾಗಿರುವ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್ ಹೊಂದಿರುವ ನಟರ ಸಾಲಿನಲ್ಲಿ ನಟ ಕಿಚ್ಚ ಸುದೀಪ್‌ ಮೊದಲ ಸ್ಥಾನದಲ್ಲಿದ್ದರು. ಇದೀಗ ಈ ಸಾಲಿಗೆ ಎರಡನೇ ಸ್ಥಾನದಲ್ಲಿ ಉಪೇಂದ್ರ ಹೆಸರು ಸೇರ್ಪಡೆಯಾಗಿದೆ. ಉಳಿದಂತೆ 8.79 ಲಕ್ಷ ಫಾಲೋವರ್ ಹೊಂದುವ ಮೂಲಕ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಮೂರನೆ ಸ್ಥಾನ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next