Advertisement

ಗಾಂಧಿನಗರ ಮತ್ತೆ ಕಲರ್‌ ಫುಲ್‌ : ಈ ವಾರ ಏಳು ಸಿನಿಮಾ ರಿಲೀಸ್‌

11:38 AM Feb 09, 2022 | Team Udayavani |

ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇಕಡ ನೂರರಷ್ಟುಪ್ರೇಕ್ಷಕರ ಪ್ರವೇಶಾತಿಗೆ ಅನುಮತಿ ಸಿಗುತ್ತಿದ್ದಂತೆ, ಗಾಂಧಿನಗರದಲ್ಲಿ ಸಿನಿಮಾಗಳ ರಿಲೀಸ್‌ ಭರಾಟೆಯೂ ಜೋರಾಗುತ್ತಿದೆ. ಫೆಬ್ರವರಿ ಮೊದಲ ವಾರದಿಂದ ಪೂರ್ಣಪ್ರಮಾಣದಲ್ಲಿ ಪ್ರೇಕ್ಷಕರ ಪ್ರವೇಶಾತಿಗೆ ಸಿಕ್ಕಿದ್ದು, ಮೊದಲ ವಾರದಲ್ಲೇ “ಜಾಡಘಟ್ಟ’, “ಆಪರೇಶನ್‌ 72′ ಮತ್ತು “ಹಳ್ಳಿ ಹೈಕ್ಳು ಪ್ಯಾಟೆ ಲೈಫ‌ು’ ಎಂಬ ಮೂರು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿದ್ದವು. ಇನ್ನು ಫೆಬ್ರವರಿ ಎರಡನೇ ಶುಕ್ರವಾರ (ಫೆ. 11)ರಂದು ಕೂಡ ಸದ್ಯ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿ ನಿಂತಿವೆ.

Advertisement

ಸದ್ಯ ಫೆ. 11ಕ್ಕೆ “ಲವ್‌ ಮಾಕ್ಟೇಲ್‌-2′, “ಫೋರ್‌ವಾಲ್ಸ್‌’, “ಮಹಾರೌದ್ರಂ’, “ರೌಡಿ ಬೇಬಿ’, “ಪ್ರೀತಿಗಿಬ್ಬರು’, “ಒಪ್ಪಂದ’, “ಇದೇ ಅಂತರಂಗ ಶುದ್ಧಿ’ ಸೇರಿದಂತೆ ಏಳು ಸಿನಿಮಾಗಳುತಮ್ಮ ಬಿಡುಗಡೆ ಯನ್ನು ಘೋಷಿಸಿಕೊಂಡಿವೆ.

ಮತ್ತೆ ಪ್ರೇಕ್ಷಕರನ್ನು ಸೆಳೆಯುವ ಕಸರತ್ತುಸುಮಾರುಎರಡುವರ್ಷಗಳಿಂದ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್ ಗಳತ್ತ ಮುಖ ಮಾಡುವ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಹೀಗಿರುವಾಗ, ಪ್ರೇಕ್ಷಕರನ್ನು ಮತ್ತೆ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡುವಂತೆ ಮಾಡುವ ದೊಡ್ಡ ಸವಾಲು ಪ್ರದರ್ಶಕರ ಮುಂದಿದೆ.

ಅದಕ್ಕಾಗಿ ಪ್ರದರ್ಶಕರಿಗೆ ಬಿಗ್‌ ಸ್ಟಾರ್ ಸಿನಿಮಾಗಳು ಮತ್ತು ವೆರೈಟಿ ಸಿನಿಮಾಗಳ ಕಂಟೆಂಟ್‌ ತುಂಬಾನೇ ಮುಖ್ಯವಾಗಿರುತ್ತದೆ. ಇನ್ನು ಸಿನಿಮಾಗಳ ಬಿಡುಗಡೆಯಿಲ್ಲದೆ ಖಾಲಿ ಹೊಡೆಯುತ್ತಿದ್ದಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಬ್ಯಾಕ್‌ ಟು ಬ್ಯಾಕ್‌ಸಿನಿಮಾಗಳು ರಿಲೀಸ್‌ ಆಗುತ್ತಿರುವುದು ಸಹಜವಾಗಿಯೇಒಂದಷ್ಟು ಜೋಶ್‌ ತಂದಿದೆ. ಬೇರೆ ಬೇರೆ ಶೈಲಿಯ ಸಿನಿಮಾಗಳ ಕಂಟೆಂಟ್‌ ಸಿಗುವುದರಿಂದ, ತಮಗೆ ಬೇಕಾದಂತಹ ಸಿನಿಮಾಗಳನ್ನು ಪಡೆದು ಪ್ರದರ್ಶಿಸಲು ಪ್ರದರ್ಶಕರಿಗೆಅನುಕೂಲವಾಗುತ್ತದೆ.

ಪ್ರೇಕ್ಷಕರ ಅಭಿರುಚಿಕೆ ತಕ್ಕಂತ ಸಿನಿಮಾಗಳನ್ನು ಪಡೆದು, ಮತ್ತೆ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳತ್ತ ಪ್ರೇಕ್ಷಕರನ್ನು ಸೆಳೆಯಲು ಇದುಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಪ್ರದರ್ಶಕರದ್ದು. ಗಾಂಧಿನಗರದಲ್ಲಿ ಮತ್ತೆ ಸಿನಿ ಟ್ರಾಫಿಕ್‌ ಆತಂಕ? ಸುಮಾರು ಎರಡು ವರ್ಷಗಳಿಂದ ಬಿಡುಗಡೆಯಾಗದೆ ಕಾದು ಕುಳಿತ ಸಿನಿಮಾಗಳು ಈಗ ಮತ್ತೆ ತೆರೆಗೆ ಬರುವ ಯೋಚನೆಮಾಡುತ್ತಿರುವುದರಿಂದ, ಪ್ರತಿವಾರ ಕನಿಷ್ಟ ಐದಾರು ಸಿನಿಮಾಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಳ್ಳುತ್ತಿವೆ. ಸದ್ಯ ಫೆಬ್ರವರಿ ತಿಂಗಳಿನಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಮತ್ತುಬಿಡುಗಡೆ ಘೋಷಿಸಿಕೊಂಡಿರುವ ಸಿನಿಮಾಗಳ ಸಂಖ್ಯೆಯೇ ಸುಮಾರು 25ರ ಗಡಿ ದಾಟುತ್ತದೆ.

Advertisement

ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೀಗೆ ಮುಂದುವರೆದರೆ, ಮಾರ್ಚ್‌ -ಏಪ್ರಿಲ್‌ ವೇಳೆಗೆ ಸ್ಯಾಂಡಲ್‌ವುಡ್‌ನ‌ಲ್ಲಿ ಮತ್ತೂಮ್ಮೆ ಸಿನಿಮಾಗಳ “ಅತಿವೃಷ್ಟಿ’ಆತಂಕ ಎದುರಾದರೂ ಅಚ್ಚರಿಯಿಲ್ಲ.ಇಲ್ಲಿಯವರೆಗೆ ಥಿಯೇಟರ್‌ಗಳಲ್ಲಿ ಪೂರ್ಣ ಪ್ರವೇಶಾತಿ ಅವಕಾಶವಿಲ್ಲದೆ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದವರು, ಮುಂದಿನ ದಿನಗಳಲ್ಲಿ ಥಿಯೇಟರ್‌ಗಳಲಭ್ಯತೆ ಇಲ್ಲದೆ ಬಿಡುಗಡೆಗೆ ಹಿಂದೇಟು ಹಾಕಬಹುದು. ಒಟ್ಟಾರೆ ಎಲ್ಲವೂ ಸರಿಹೋಯ್ತು ಅಂದುಕೊಳ್ಳುತ್ತಿರುವಾಗಲೇ ಗಾಂಧಿನಗರದಲ್ಲಿ ಮತ್ತೆ ಸಿನಿ ಟ್ರಾಫಿಕ್ ಆತಂಕ ಸಣ್ಣಗೆ ಮನೆ ಮಾಡುತ್ತಿರುವುದಂತೂ ಸುಳ್ಳಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next