Advertisement

ಬೆಳಪು ಅಭಿವೃದ್ಧಿಗೆ ಯುಪಿಸಿಎಲ್‌ 3 ಕೋ. ರೂ.

10:15 AM Jul 24, 2018 | Harsha Rao |

ಕಾಪು: ಅದಾನಿ – ಯುಪಿಸಿಎಲ್‌ ವ್ಯಾಪ್ತಿಯ 7 ಗಾಮ ಪಂ.ಗಳ ಅಭಿವೃದ್ಧಿಗೆ ಸಿಎಸ್‌ಆರ್‌ ಯೋಜನೆಯಡಿ 22.73 ಕೋ.ರೂ. ಮೀಸಲಿ ರಿಸಿದೆ. ಬೆಳಪು ಗ್ರಾಮದಲ್ಲಿ 3 ಕೋ.ರೂ. ಮೂಲಕ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರಥಮ ಹಂತದಲ್ಲಿ 71.85 ಲಕ್ಷ ರೂ. ಕಾಮಗಾರಿ ನಡೆಸಲಾಗಿದ್ದು, ದ್ವಿತೀಯ ಹಂತ ದಲ್ಲಿ 36 ಲಕ್ಷ ರೂ. ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅದಾನಿ – ಯುಪಿಸಿಎಲ್‌ನ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕಿಶೋರ್‌ ಆಳ್ವ ಹೇಳಿದರು.

Advertisement

ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು.

ಮಾದರಿ ಗ್ರಾಮ
ಬೆಳಪು ಗ್ರಾಮ ಪಂಚಾಯತ್‌ನ ಬೇಡಿಕೆಯಂತೆ ಮಲಂಗೋಳಿ ರಸ್ತೆ, ವಿನಯ ನಗರ ಒಳರಸ್ತೆ ಮತ್ತು ಜಾರಂದಾಯ ರಸ್ತೆಗೆ ಕಾಂಕ್ರೀಟ್‌ ಹಾಕುವ ಕಾಮಗಾರಿಗೆ ಚಾಲನೆ ನೀಡ ಲಾಗುತ್ತಿದ್ದು, ಬೆಳಪು ಗ್ರಾಮವನ್ನು ಮಾದರಿಯಾಗಿ ನಿರ್ಮಿಸಬೇಕೆಂಬ ಗ್ರಾಮ ಪಂಚಾಯತ್‌ ಆಡಳಿತದ ಕನಸು ನನಸಾಗಿಸಲು ಇದು ನಮ್ಮ ಭರವಸೆಯ ಸಹಕಾರವಾಗಿದೆ. ಮುಂದೆ 40 ಲಕ್ಷ ರೂ. ವೆಚ್ಚದ ಯೋಜನೆಗೆ ಅನುಮೋದನೆ ದೊರಕಿದ್ದು, ನಿರಂತರ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅದಾನಿ – ಯುಪಿಸಿಎಲ್‌ ಸಿಎಸ್‌ಆರ್‌ ಬದ್ಧವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಯುಪಿಸಿಎಲ್‌ನ ವಿಶೇಷ ಸಹಕಾರ ದೊರಕುತ್ತಿದೆ. ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಮೂಲಕ ಯುಪಿಸಿಎಲ್‌ ಜನೋಪಯೋಗಿಯಾಗಿ ಮೂಡಿ ಬರುತ್ತಿರು ವುದು ಸ್ವಾಗತಾರ್ಹ ಎಂದರು.

ಉಡುಪಿ ತಾ. ಪಂ. ಸದಸ್ಯೆ ಶೇಖಬ್ಬ ಉಚ್ಚಿಲ, ಬೆಳಪು ಗ್ರಾ.ಪಂ. ಉಪಾಧ್ಯಕ್ಷೆ  ಶೋಭಾ ಭಟ್‌, ಸದಸ್ಯರಾದ ಶರತ್‌ ಕುಮಾರ್‌, ದಿನೇಶ್‌ ಪೂಜಾರಿ, ಕರುಣಾಕರ ಶೆಟ್ಟಿ ಪಣಿಯೂರುಗುತ್ತು, ವಿಜಯಲಕ್ಷ್ಮೀ ದೇವಾಡಿಗ, ಸುರೇಶ್‌ ದೇವಾಡಿಗ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಚ್‌.ಆರ್‌. ರಮೇಶ್‌, ಯುಪಿಸಿಎಲ್‌ನ ಅಧಿ ಕಾರಿಗಳಾದ ಗಿರೀಶ್‌ ನಾವಡ, ರವಿ ಜೀರೆ, ಅದಾನಿ ಫೌಂಡೇಶನ್‌ನ ಅನುದೀಪ್‌ ಪೂಜಾರಿ, ಸುಖೇಶ್‌ ಸುವರ್ಣ, ವಿನೀತ್‌ ಅಂಚನ್‌ ಸಹಿತ ಹಲವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next