Advertisement
ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆ ಕಾರಣಗಳಿಂದ, ಮೈತ್ರಿಕೂಟ ಹುದ್ದೆಯಲ್ಲಿ ಮುಂದುವರಿ ಯಲು ಸೋನಿಯಾ ಗಾಂಧಿ ನಿರಾಸಕ್ತಿ ತಾಳಿರುವುದರಿಂದ ಯುಪಿಎ ಮುನ್ನಡೆಸುವ ಹೊಣೆಯಿಂದ ಅವರು ಹಿಂದೆ ಸರಿಯಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖೀಸಿ “ನ್ಯೂಸ್18′ ವರದಿ ಮಾಡಿದೆ.
ನಾಯಕತ್ವದ ನೊಗವನ್ನೇ ರಾಹುಲ್ ಗಾಂಧಿ ಕೆಳಗಿಟ್ಟಿ ದ್ದಾರೆ. ಇನ್ನೊಂದೆಡೆ ವಯಸ್ಸಿನಲ್ಲಿ ರಾಹುಲ್ ಗಾಂಧಿಯಂಥ ಕಿರಿಯರನ್ನು ಸಂಭಾಳಿಸಿಕೊಂಡು ಹೋಗಲು ಡಿಎಂಕೆ ನಾಯಕ ಸ್ಟಾಲಿನ್‌ರಂಥವರೂ ಸಿದ್ಧರಿಲ್ಲ. ಕಾಂಗ್ರೆಸ್‌ಗಿಂತ ತಮ್ಮ ಪಕ್ಷ ಸಾಧನೆಯೇ ಉತ್ತಮ ವಿದೆ ಎಂಬ ಭಾವನೆಯೂ ಅವರಿ ಗಿದೆ. ಮೈತ್ರಿ ಕೂಟದ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಅಸ್ತಿತ್ವ ಉಳಿದರೆ ಸಾಕೆನ್ನುವ ಯೋಚನೆಯಲ್ಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಸ್ತುತ ಸೋನಿಯಾ ಬಿಟ್ಟರೆ, ಶರದ್ ಪವಾರ್ ಮಾತುಗಳಿಗೆ ಯುಪಿಎ ಕೂಟದಲ್ಲಿ ಹೆಚ್ಚು ಬೆಲೆ ಸಿಗುತ್ತಿದೆ. ಪವಾರ್ ನೇಮಕವನ್ನು ಇತರ ಪಕ್ಷಗಳೂ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಸೋನಿಯಾ ಗಾಂಧಿ ಲೆಕ್ಕಾಚಾರ. ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ನೇಮಕವಾಗಲಿದ್ದಾರೆ ಎಂಬ ವರದಿಗಳನ್ನು ಎನ್‌ಸಿಪಿ ತಿರಸ್ಕರಿಸಿದೆ. ಈ ಕುರಿತು ಚರ್ಚೆಗಳೇ ನಡೆದಿಲ್ಲ ಎಂದಿದೆ.