ಹೈದರಾಬಾದ್: ಸೋಮವಾರ ನಡೆದ ಜಿದ್ದಾಜಿದ್ದಿಯ ಪ್ರೊ ಕಬಡ್ಡಿ ಪಂದ್ಯದಲ್ಲಿ ಯುಪಿ ಯೋಧಾಸ್ 33-32 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿದೆ.
ಯುಪಿ ಯೋಧಾಸ್ ಪರ ಪ್ರದೀಪ್ ನರ್ವಾಲ್ 25 ದಾಳಿಗಳಲ್ಲಿ 14 ಅಂಕ ಪಡೆದರು. ಉಳಿದವರು ಇವರ ಸಮಕ್ಕೆ ಬರಲಿಲ್ಲ. ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 14 ದಾಳಿಗಳಲ್ಲಿ 10 ಅಂಕ ಗಳಿಸಿದರು. ಶ್ರೀಕಾಂತ್ ಜಾಧವ್ 14 ದಾಳಿಗಳಲ್ಲಿ 6 ಅಂಕ ಪಡೆದರು.
ಎರಡೂ ತಂಡಗಳಲ್ಲಿ ಮುಖ್ಯವಾದ ಕೊರತೆ ಕಾಣಿಸಿದ್ದು ರಕ್ಷಣಾ ವಿಭಾಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸದೇ ಹೋಗಿದ್ದು. ಒಂದು ವೇಳೆ ಇಲ್ಲಿ ಯಶಸ್ಸು ಸಿಕ್ಕಿದ್ದರೆ ಪೈಪೋಟಿ ಇನ್ನೂ ತೀವ್ರವಾಗುತ್ತಿತ್ತು. ಗಮನಾರ್ಹ ಸಂಗತಿಯೆಂದರೆ ದಾಳಿಯಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನವೇನು ಬರಲಿಲ್ಲ.