Advertisement

Kochi; ವಿದೇಶಿ ಮಹಿಳಾ ಪ್ರವಾಸಿಗರಿಂದ ಪ್ಯಾಲೆಸ್ತೀನ್ ಪರ ಬೋರ್ಡ್‌ಗಳು ಧ್ವಂಸ!!

08:31 PM Apr 17, 2024 | Team Udayavani |

ಕೊಚ್ಚಿ: ಇಬ್ಬರು ವಿದೇಶಿ ಮಹಿಳಾ ಪ್ರವಾಸಿಗರು ಕೇರಳದ ಕೊಚ್ಚಿ ನಗರದಲ್ಲಿ ಅಳವಡಿಸಲಾಗಿದ್ದ ಪ್ಯಾಲೆಸ್ತೀನ್ ಪರ ಬೋರ್ಡ್‌ಗಳನ್ನು ಧ್ವಂಸಗೊಳಿಸಿದ್ದಾರೆ.

Advertisement

ವಿಡಿಯೋದಲ್ಲಿ ಪೋಸ್ಟರ್‌ಗಳ ಕುರಿತು ವಿದೇಶಿಗರು ಸ್ಥಳೀಯರೊಂದಿಗೆ ವಾದಿಸುತ್ತಿರುವುದನ್ನು ಕಾಣಬಹುದಾಗಿದ್ದು, ಈ ಪೋಸ್ಟರ್ ಗಳು ಯಹೂದಿ ಜನರಿಗೆ ಅವಮಾನ ಎಂದು ಪ್ರವಾಸಿಗರು ಹೇಳಿದ್ದಾರೆ.

ಏಪ್ರಿಲ್ 15ರಂದು ಈ ಘಟನೆ ನಡೆದಿದ್ದು, ಇಬ್ಬರು ಪ್ರವಾಸಿಗರ ವಿರುದ್ಧ ಫೋರ್ಟ್ ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದೇಶಿಗರು ಪಾದಚಾರಿ ಮಾರ್ಗದಲ್ಲಿ ನಿಂತಿದ್ದು, ಅವರ ಸುತ್ತಲೂ ಛಿದ್ರ ಮಾಡಿರುವ ಬೋರ್ಡ್‌ಗಳ ತುಂಡುಗಳು ಹರಡಿಕೊಂಡಿವೆ. ನೀವು ನಾಶಪಡಿಸಿದ್ದೀರಿ ಈಗ ಕಸದ ತುಂಡುಗಳನ್ನು ತೆರವುಗೊಳಿಸಿ ಎಂದು ಸ್ಥಳೀಯರು ಅವರಲ್ಲಿ ಜಗಳವಾಡುವುದನ್ನು ಕಾಣಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next