Advertisement

Passport ಪರಿಶೀಲನೆಗೆ ಬಂದ ಮಹಿಳೆ ತಲೆಗೆ ಗುಂಡು… ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಾರಿ

12:26 PM Dec 14, 2023 | Team Udayavani |

ಲಕ್ನೋ: ಉತ್ತರ ಪ್ರದೇಶದ ಅಲಿಗಢದಲ್ಲಿ ಪೊಲೀಸ್ ಠಾಣೆಯೊಳಗೆ ಪೊಲೀಸ್ ಅಧಿಕಾರಿಯೊಬ್ಬರು ತಪ್ಪಾಗಿ ಗುಂಡು ಹಾರಿಸಿದ ಪರಿಣಾಮ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

Advertisement

ಮೃತ ಮಹಿಳೆಯನ್ನು ಇಶ್ರತ್ ನಿಗರ್ (52) ಎನ್ನಲಾಗಿದೆ. ಘಟನೆ ಸಂಬಂಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದಾರೆ.

ಘಟನೆ ವಿವರ:
ಉತ್ತರ ಪ್ರದೇಶದ ಅಲಿಗಢದ ಇಶ್ರತ್ ನಿಗರ್ ಅವರು ತಮ್ಮ ಪಾಸ್ ಪೋರ್ಟ್ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಬಂದಿದ್ದರು ಈ ವೇಳೆ ಮಹಿಳೆಯ ಬಳಿ ವಿವರ ಕೇಳುವ ವೇಳೆ ಸಬ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ ಶರ್ಮಾ ಅವರು ತಮ್ಮ ಕೈಯಲ್ಲಿ ಸರ್ವಿಸ್ ಪಿಸ್ತೂಲ್ ಹಿಡಿದು ಕೊಂಡಿದ್ದರು ಅಲ್ಲದೆ ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು ಈ ವೇಳೆ ತಪ್ಪಾಗಿ ಪೊಲೀಸ್ ಅಧಿಕಾರಿ ಕೈಯಲ್ಲಿದ್ದ ಬಂಧೂಕಿನಿಂದ ಗುಂಡು ಹಾರಿ ಎದುರಿಗೆ ಇದ್ದ ಮಹಿಳೆಯ ತಲೆಗೆ ಹೊಕ್ಕಿದೆ ಪರಿಣಾಮ ಕುಸಿದು ಬಿದ್ದ ಮಹಿಳೆಯನ್ನು ಕೂಡಲೇ ಅವರನ್ನು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಜೆಎನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದ ಮಹಿಳೆ ಗುರುವಾರ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಇತ್ತ ಘಟನೆ ನಡೆಯುತ್ತಿದ್ದಂತೆ ಗಾಬರಿಗೊಂಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ ಶರ್ಮಾ ಅವರು ತಲೆಮರೆಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈತಾನಿ, ದುರದೃಷ್ಟಕರ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಯ ಕೈಯಿಂದ ಗುಂಡು ಹಾರಿದೆ ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದ ಅವರು ಸದ್ಯ ಮೃತರ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ಸಮಿತಿ ನಡೆಸುತ್ತಿದೆ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Advertisement

ತಲೆಮರೆಸಿಕೊಂಡ ಅಧಿಕಾರಿಗಾಗಿ ಶೋಧ:
ಲೋಡ್ ಮಾಡಿದ ರಿವಾಲ್ವರ್ ಹಸ್ತಾಂತರಿಸಿದ ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಎಸ್‌ಐ ಮನೋಜ್ ಕುಮಾರ್ ಶರ್ಮಾ ತಲೆಮರೆಸಿಕೊಂಡಿದ್ದು ಈ ಕುರಿತು ತನಿಖೆ ನಡೆಯುತ್ತಿದೆ. ಅಲ್ಲದೆ ಮಾಹಿತಿ ನೀಡಿದವರಿಗೆ 20,000 ಬಹುಮಾನವನ್ನೂ ಘೋಷಿಸಲಾಗಿದೆ.

ಇದನ್ನೂ ಓದಿ: ‘Salaar’ ಸಿನಿಮಾದಲ್ಲಿ ಯಶ್‌ ವಿಶೇಷ ಪಾತ್ರದಲ್ಲಿ ಇರುವುದು.. ಸ್ಪಷ್ಟನೆ ಕೊಟ್ಟ ನಿರ್ಮಾಪಕ

Advertisement

Udayavani is now on Telegram. Click here to join our channel and stay updated with the latest news.

Next