ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 6 ವಿಕೆಟಿಗೆ 161 ರನ್ ಪೇರಿಸಿದರೆ, ಯುಪಿ 16.3 ಓವರ್‌ಗಳಲ್ಲಿ 3 ವಿಕೆಟಿಗೆ 163 ರನ್ ಬಾರಿಸಿತು. ಇದು ಮುಂಬೈಗೆ ಎದುರಾದ ಮೊದಲ ಸೋಲು.
Advertisement
ಅಲಿಸ್ಸಾ ಹೀಲಿ-ಕಿರಣ್ ನವಿYರೆ ಯುಪಿಗೆ ಪ್ರಚಂಡ ಆರಂಭ ಒದಗಿಸಿದರು. 9.1 ಓವರ್‌ಗಳಲ್ಲಿ 94 ರನ್ ಪೇರಿಸಿದರು. ಇದರಲ್ಲಿ ಕಿರಣ್ ಕೊಡುಗೆ 57 ರನ್. ಕೇವಲ 31 ಎಸೆತ ಎದುರಿಸಿದ ಅವರು 6 ಫೋರ್, 4 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಹೀಲಿ ಗಳಿಕೆ 33 ರನ್. ಆದರೆ 4 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡ ಯುಪಿ ಒತ್ತಡಕ್ಕೆ ಸಿಲುಕಿತು. ಆದರೆ 4ನೇ ವಿಕೆಟಿಗೆ ಜತೆಗೂಡಿದ ಗ್ರೇಸ್ ಹ್ಯಾರಿಸ್ (ಅಜೇಯ 38) ಮತ್ತು ದೀಪ್ತಿ ಶರ್ಮ (ಅಜೇಯ 27) ಸೇರಿಕೊಂಡು ತಂಡವನ್ನು ದಡ ಮುಟ್ಟಿಸಿದರು.
ಮುಂಬೈ ಇಂಡಿಯನ್ಸ್‌ನ ಸವಾಲಿನ ಮೊತ್ತಕ್ಕೆ ಕಾರಣ ರಾದವರು ಆರಂಭಿಕ ಆಟಗಾರ್ತಿ, ವೆಸ್ಟ್ ಇಂಡೀಸ್‌ನ ಹ್ಯಾಲಿ ಮ್ಯಾಥ್ಯೂಸ್. 15ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಅವರು 55 ರನ್ ಬಾರಿಸಿದರು (47 ಎಸೆತ, 9 ಬೌಂಡರಿ, 1 ಸಿಕ್ಸರ್). ಇವರ ಜತೆಗಾರ್ತಿ ಯಾಸ್ತಿಕಾ ಭಾಟಿಯಾ 26 ರನ್ ಕೊಡುಗೆ ಸಲ್ಲಿಸಿದರು (22 ಎಸೆತ, 3 ಬೌಂಡರಿ, 1 ಸಿಕ್ಸರ್). ಸ್ಕಿವರ್ ಬ್ರಂಟ್ 19, ಅಮೇಲಿಯಾ ಕೆರ್ರ 23, ಪೂಜಾ ವಸ್ತ್ರಾಕರ್ 18, ಐಸ್ಸಿ ವೋಂಗ್ ಅಜೇಯ 15 ರನ್ ಮಾಡಿದರು.
ಮ್ಯಾಥ್ಯೂಸ್-ಯಾಸ್ತಿಕಾ ಜೋಡಿಯಿಂದ ಮೊದಲ ವಿಕೆಟಿಗೆ 8 ಓವರ್‌ಗಳಿಂದ 50 ರನ್ ಒಟ್ಟುಗೂಡಿತು. ಯುಪಿ ಪರ ಬೌಲಿಂಗ್ ನಡೆಸಿದ ಎಲ್ಲ 5 ಮಂದಿ ತಲಾ ಒಂದು ವಿಕೆಟ್ ಉರುಳಿಸಿದರು. ಗಾಯಾಳಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪ್ರಧಾನ ವೇಗಿ ಶಬಿ°ಮ್ ಇಸ್ಮಾಯಿಲ್ ಅವರ ಸೇವೆಯಿಂದ ಮುಂಬೈ ವಂಚಿತವಾಗಿತ್ತು. ಹೀಗಾಗಿ ನ್ಯಾಟ್ ಸ್ಕಿವರ್ ಬ್ರಂಟ್ ತಂಡವನ್ನು ಮುನ್ನಡೆಸಿದರು.