Advertisement

Superglue Surgery: ಫೆವಿಕ್ವಿಕ್‌, ಬ್ಲೌಸ್‌ಹುಕ್‌ ಬಳಸಿ ಆಮೆ ಚಿಪ್ಪು ಶಸ್ತ್ರಚಿಕಿತ್ಸೆ!

09:08 PM Jul 10, 2024 | Team Udayavani |

ಲಕ್ನೋ: ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರಿನ ಚಕ್ರಕ್ಕೆ ಸಿಲುಕಿದ್ದ ಆಮೆಯೊಂದರ ಚಿಪ್ಪು ತುಂಡಾಗಿದ್ದನ್ನು ಫೆವಿಕ್ವಿಕ್‌ ಮತ್ತು ಬ್ಲೌಸ್‌ನ ಹುಕ್‌ ಬಳಸಿ ಶಸ್ತ್ರಚಿಕಿತ್ಸೆ ನಡೆಸಿ, ಸರಿಪಡಿಸಲಾಗಿದೆ. ಬರೇಲಿಯಲ್ಲಿನ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ತಜ್ಞರು ಈ ವಿನೂತನ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ.

Advertisement

ಗಾಯಗೊಂಡಿದ್ದ ಆಮೆಯನ್ನು ಪರಿಸರ ಕಾರ್ಯಕರ್ತರೊಬ್ಬರು ಐವಿಆರ್‌ಐಗೆ ತರಲಾಗಿತ್ತು. . ಆಮೆ ಅದಾಗಲೇ ತುಂಡಾಗಿದ್ದ ಕಾರಣ ಅದು ಸಾವು-ಬದುಕಿನ ಹೋರಾಟದಲ್ಲಿತ್ತು.

ಅದರ ಒಳಗೆ 7 ಮೊಟ್ಟೆಗಳೂ ಕೂಡ ಇದ್ದವು. ಈ ಹಿನ್ನೆಲೆಯಲ್ಲಿ ತಕ್ಷಣವೇ ಶಸ್ತ್ರ ಚಿಕಿತ್ಸೆ ನಡೆಸಬೇಕಿತ್ತು. ಆದರೆ, ಆಮೆಯ ಚಿಪ್ಪಿನ ಬಿರುಕುಗಳನ್ನು ಸರಿ ಪಡಿಸಲು ಮೂಳೆ ವೈದ್ಯರು ಬಳಸುವ ಅಂಟು ಆ ಸಮಯಕ್ಕೆ ಲಭ್ಯವಿರಲಿಲ್ಲ.

ಸಮಯವೂ ಕಡಿಮೆ ಇದ್ದ ಕಾರಣ ಸೂಪರ್‌ ಗ್ಲೂ ಹಾಗೂ ಬ್ಲೌಸ್‌ ಹುಕ್‌ ಬಳಸಿ ಚಿಪ್ಪನ್ನು ಅಂಟಿಸಲಾಗಿದೆ. ನಂತರ ಶಸ್ತ್ರ ಚಿಕಿತ್ಸೆಗೆ ಬಳಸುವ ವೈರ್‌ನಿಂದ ಹೊಲಿಗೆ ಹಾಕಲಾಗಿದೆ. ಡಾ.ಅಭಿಜಿತ್‌ ಪಾಬ್ಡೆ ಹಾಗೂ ಡಾ. ಕಮಲೇಶ್‌ ಕುಮಾರ್‌ ಈ ಶಸ್ತ್ರ ಚಿಕಿತ್ಸೆ ನಡೆಸಿ, ಯಶಸ್ವಿಯಾಗಿದ್ದಾರೆ. ಸದ್ಯ ಆಮೆ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next