ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೃಹ ಖಾತೆಯನ್ನು ತನ್ನಲ್ಲೇ ಉಳಿಸಿಕೊಂಡು ಇತರ ಮುಖ್ಯ ಖಾತೆಗಳನ್ನು ಸಹೋದ್ಯೋಗಿಗಳಿಗೆ ಹಂಚಿದ್ದಾರೆ.
ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರಿಗೆ ಲೋಕೋಪಯೋಗಿ, ಆಹಾರ ಸಂಸ್ಕರಣೆ, ಮನೋರಂಜನಾ ತೆರಿಗೆ, ಸಾರ್ವಜನಿಕ ಉದ್ಯಮಗಳ ಖಾತೆಯನ್ನು ನೀಡಲಾಗಿದೆ.
ಇನ್ನೋರ್ವ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರಿಗೆ ಉನ್ನತ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ನೀಡಲಾಗಿದೆ.
ಅತ್ಯಂತ ಪ್ರಮುಖ ಎನಿಸಿರುವ ಹಣಕಾಸು ಖಾತೆಯನ್ನು ರಾಜೇಶ್ ಅಗ್ರವಾಲ್‌ಗೆ ನೀಡಲಾಗಿದೆ.
ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಸಹಕಾರಿ ಖಾತೆ, ಸುರೇಶ್ ಖನ್ನಾಗೆ ಸಂಸದೀಯ ವ್ಯವಹಾರ, ಸಿದ್ಧಾರ್ಥ ನಾಥ್ ಸಿಂಗ್‌ಗೆ ಆರೋಗ್ಯ, ಚೇತನ ಚೌಹಾಣ್‌ಗೆ ಕ್ರೀಡೆ, ಸೂರ್ಯ ಪ್ರತಾಪ್ ಶಾಹಿ ಅವರಿಗೆ ಕೃಷಿ, ಸ್ವಾತಿ ಸಿಂಗ್ ಅವರಿಗೆ ಮಹಿಳೆ ಮತ್ತು ಶಿಶು ಕಲ್ಯಾಣ, ಮೊಹ್ಸಿನ್ ರಝಾ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್, ಐಟಿ, ಅಲ್ಪಸಂಖ್ಯಾಕ ವ್ಯವಹಾರಗಳು, ಮುಸ್ಲಿಂ ವಕ್ಫ್ ಮತ್ತು ಹಜ್, ಶ್ರೀಕಾಂತ್ ಶರ್ಮಾಗೆ ವಿದ್ಯುತ್ ಮತ್ತು ಜೈ ಪ್ರಕಾಶ್ ಸಿಂಗ್‌ಗೆ ಅಬಕಾರಿ ಖಾತೆಯನ್ನು ನೀಡಲಾಗದೆ.
ನಿನ್ನೆ ಮಂಗಳವಾರ ಮುಖ್ಯಮಂತ್ರಿ ಆದಿತ್ಯನಾಥ್ ಅವರು ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ ಬಳಿಕವೇ ತಮ್ಮ ಸಂಪುಟ ಖಾತೆಗಳ ಹಂಚಿಕೆಯನ್ನು ತೀರ್ಮಾನಿಸಿದ್ದರು ಎನ್ನಲಾಗಿದೆ.