Advertisement

ಮತಾಂತರ ಜಾಲ ಬೇಧಿಸಿದ ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ, ಇಬ್ಬರ ಬಂಧನ

03:04 PM Jun 21, 2021 | Team Udayavani |

ನವದೆಹಲಿ: ದೇಶಾದ್ಯಂತ ನಡೆಸುತ್ತಿದ್ದ ಧಾರ್ಮಿಕ ಮತಾಂತರ ಜಾಲವನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಜೂನ್ 21) ಇಬ್ಬರನ್ನು ಬಂಧಿಸಿದೆ. ಆರೋಪಿಗಳನ್ನು ಮುಫ್ತಿ ಖಾಜಿ ಜಹಾಂಗೀರ್ ಖಾಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಎಂದು ಗುರುತಿಸಲಾಗಿದೆ. ಇಬ್ಬರೂ ದಕ್ಷಿಣ ದೆಹಲಿಯ ಜಾಮೀಯಾ ನಗರ ನಿವಾಸಿಗಳು ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:2024ರ ಸಾರ್ವತ್ರಿಕ ಚುನಾವಣೆ ಗುರಿ: ಎರಡನೇ ಬಾರಿ ಶರದ್ ಪವಾರ್, ಪ್ರಶಾಂತ್ ಕಿಶೋರ್ ಚರ್ಚೆ

ದೇಶದ ವಿವಿಧೆಡೆ ಕಿವುಡ ಮಕ್ಕಳು ಮತ್ತು ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸುವ ಜಾಲ ಇದಾಗಿದ್ದು, ಈವರೆಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಮತಾಂತರ ಮಾಡಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ. ನೋಯ್ಡಾದ ಮೂಕ ಮತ್ತು ಕಿವುಡ ಶಾಲೆಯ 12ಕ್ಕೂ ಅಧಿಕ ಮಕ್ಕಳನ್ನು ಮತಾಂತರ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಉತ್ತರಪ್ರದೇಶದ ನೂತನ ಮತಾಂತರ ನಿಗ್ರಹ ಕಾಯ್ದೆಯಡಿ ಗೋಮ್ಟಿನಗರ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಎಫ್ ಐಆರ್ ನಲ್ಲಿ ಇಸ್ಲಾಮಿಕ್ ದಾವಾ ಕೇಂದ್ರದ ಅಧ್ಯಕ್ಷರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next