Advertisement

ಉತ್ತರಪ್ರದೇಶ ಪಂಚಾಯತ್‌ ಚುನಾವಣೆ : ಅತ್ಯಾಚಾರಿ ಕುಲದೀಪ್‌ ಪತ್ನಿಗೆ ಚುನಾವಣಾ ಟಿಕೆಟ್‌!

08:39 PM Apr 09, 2021 | Team Udayavani |

ಲಕ್ನೋ: ಉತ್ತರಪ್ರದೇಶ ಈಗ ಜಿಲ್ಲಾ ಪಂಚಾಯತ್‌ ಚುನಾವಣೆಗೆ ಸಿದ್ಧವಾಗಿದೆ. ಆದರೆ ಚರ್ಚೆಯ ವಿಚಾರವೇ ಬೇರೆಯಿದೆ! ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಸ್ಥಾನದಿಂದ ವಜಾಗೊಳಿಸಲ್ಪಟ್ಟಿರುವ ಕುಲದೀಪ್‌ ಸಿಂಗ್‌ ಸೆಂಗರ್‌ ಪತ್ನಿ ಸಂಗೀತಾ ಸಿಂಗ್‌ ಸೆಂಗರ್‌ಗೆ ಬಿಜೆಪಿ ಟಿಕೆಟ್‌ ನೀಡಿರುವುದು.

Advertisement

ಸಂಗೀತಾ ಸಿಂಗ್‌ 2016ರಿಂದ ಉನ್ನಾವ್‌ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿದ್ದರು. ಈ ಬಾರಿ ಅವರಿಗೆ ಉನ್ನಾವ್‌ನ ಫ‌ತೇಪುರ ಚೌರಾಸಿ ತೃತೀಯ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

2017ರಲ್ಲಿ ಬಂಗಾರ್ಮಾವು ಕ್ಷೇತ್ರದಲ್ಲಿ ಕುಲದೀಪ್‌ ಸೆಂಗರ್‌ ಗೆದ್ದು ಶಾಸಕರಾಗಿದ್ದರು. 2018ರಲ್ಲಿ ಕುಖ್ಯಾತ ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿತು. 2019ರಲ್ಲಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿತು. ಅದೇ ವರ್ಷ ಡಿಸೆಂಬರ್‌ನಲ್ಲಿ ಅವರು ಶಾಸಕ ಸ್ಥಾನ ಕಳೆದುಕೊಂಡಿದ್ದರು.

ಇದನ್ನೂ ಓದಿ :ಬೆಂಗಳೂರಿನಲ್ಲಿ ಟೆಸ್ಲಾ ಶೋರೂಂ? ಭಾರತದಲ್ಲಿ ಒಟ್ಟು 3 ಶೋರೂಂ ತೆರೆಯಲು ಸಂಸ್ಥೆ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next