ಲಕ್ನೋ : 2010ರ ಜು.12ರಂದು ತನ್ನ ಎದುರಾಳಿಗಳು ತನ್ನ ಮೇಲೆ ನಡೆಸಿದ್ದ ರಿಮೋಟ್ ಬಾಂಬ್ ದಾಳಿಯಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದ, ಪ್ರಕೃತ ಸಿಎಂ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ಸಚಿವರಾಗಿರುವ, ಅಲಹಾಬಾದ್ ನ ಜನಪ್ರಿಯ ರಾಜಕಾರಣಿ ಎನಿಸಿಕೊಂಡಿರುವ ನಂದ ಗೋಪಾಲ್ ಗುಪ್ತಾ ಅವರು ಪ್ರತೀ ವರ್ಷ ತನ್ನ ಮರು ಹುಟ್ಟು ಆಚರಿಸುತ್ತಾರೆ; ಆ ಪ್ರಯುಕ್ತ ವರ್ಷಂಪ್ರತಿ ಪೂಜೆ, ಪುರಸ್ಕಾರ, ಹೋಮ, ಹವನಗಳನ್ನು ತಪ್ಪದೇ ನಡೆಸುತ್ತಾರೆ.
ಈ ವರ್ಷ ಈಚೆಗೆ ಅವರು ನಡೆಸಿರುವ ತಮ್ಮ “ಮರು ಹುಟ್ಟು’ ಪೂಜೆ ಪುರಸ್ಕಾರ, ಹೋಮ ಹವನಗಳ ಪೋಟೋಗಳನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಆಡಳಿತೆ ಇದ್ದಾಗ ನಂದ ಗೋಪಾಲ್ ಅಕಾ ನಂದಿ ಅವರ ಮೇಲೆ ರಿಮೋಟ್ ಬಾಂಬ್ ದಾಳಿ ನಡೆದಿತ್ತು. ಪವಾಡ ಸದೃಶವಾಗಿ ಅವರು ಬದುಕುಳಿದಿದ್ದರು.
ಉತ್ತರ ಪ್ರದೇಶದ ಅಲಹಾಮಾದ ನಗರದಲ್ಲಿ ನಿನ್ನೆ ಗುರುವಾರ ಸಚಿವ ನಂದ ಗೋಪಾಲ್ ನಡೆಸಿದ್ದ ತಮ್ಮ “ಮರು ಹುಟ್ಟು’ ಕಾರ್ಯಕ್ರಮದಲ್ಲಿ ರಾಜ್ಯಾಡಳಿತೆಯ ಅನೇಕ ಉನ್ನತ ಸಚಿವರು, ಅಧಿಕಾರಿಗಳು ಪಾಲ್ಗೊಂಡಿದ್ದರು.