Advertisement

ದಡಾರ, ರುಬೆಲ್ಲಾ ಚುಚ್ಚು ಮದ್ದು: 30 ಶಾಲಾ ಮಕ್ಕಳು ಅಸ್ವಸ್ಥ

03:15 PM Dec 07, 2018 | udayavani editorial |

ಲಕ್ನೋ : ಉತ್ತರ ಪ್ರದೇಶದಲ್ಲಿ ದಡಾರ ಮತ್ತು ರುಬೆಲ್ಲಾ ಗೆ ಚುಚ್ಚು ಮದ್ದು ನೀಡಲ್ಪಟ್ಟ 30ಕ್ಕೂ ಹೆಚ್ಚು  ಶಾಲಾ ಮಕ್ಕಳು ಅಸ್ವಸ್ಥರಾದ ಘಟನೆ ಇಂದು ಗುರುವಾರ ನಡೆದಿದೆ.

Advertisement

ಶಹಜಹಾನ್‌ಪುರ ಜಿಲ್ಲೆಯ ಸರಸ್ವತಿ ಶಿಶು ಮಂದಿರ ಶಾಲೆಯಲ್ಲಿ ಏರ್ಪಟ್ಟಿದ್ದ ಶಿಬಿರದಲ್ಲಿ ಈ ಘಟನೆ ನಡೆದಿದೆ.

ಚುಚ್ಚು ಮದ್ದು ಪಡೆದ ಮಕ್ಕಳು ತಲೆನೋವು ಮತ್ತು ತಲೆ ಸುತ್ತಿ ಬಂದಂತಾಗುತ್ತಿದೆ ಎಂದು ದೂರಿದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಒಯ್ಯಲಾಯಿತು. 

2017ರಲ್ಲಿ ವಿಶ್ವಾದ್ಯಂತ ದಡಾರಕ್ಕೆ ಸುಮಾರು 1,10,000 ಸಾವು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next