Advertisement

ಫೇಸ್ಬುಕ್‌ನಲ್ಲಿ ಪರಿಚಯವಾದ ವಿವಾಹಿತೆ: ಮತಾಂತರಗೊಳಿಸಿ ಮದುವೆ ಆದ ಯುವಕ; ಮುಂದೆ ಆದದ್ದು..

02:56 PM Jun 12, 2023 | Team Udayavani |

ಲಕ್ನೋ: ಫೇಸ್‌ಬುಕ್‌ ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯನ್ನು ಓಡಿಸಿಕೊಂಡು ಹೋಗಿ ಮತಾಂತರಗೊಳಿಸಿ  ಮದುವೆಯಾದ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಶೈಲೇಶ್‌ ಕುಮಾರ್‌ ಕಳೆದ 4 ವರ್ಷದ ಹಿಂದೆ ಲಕ್ಷ್ಮೀ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಇದೇ ವರ್ಷದ ಮೇ.31 ರ ರಾತ್ರಿ 55 ಸಾವಿರ ನಗದು ಹಾಗೂ ಚಿನ್ನಾಭರಣದೊಂದಿಗೆ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾರೆ. ಮನೆಯವರು ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎರಡು ದಿನದ ಬಳಿಕ ಲಕ್ಷ್ಮೀಗೆ ಫೇಸ್‌ ಬುಕ್‌ ನಲ್ಲಿ ಪರಿಚಯವಾದ ಜಿಲ್ಲೆಯ ಸಿಸ್ವಾನ್ ಗ್ರಾಮದ ನಿವಾಸಿ ಸಜಾವುಲ್ಲಾ ಅವರೊಂದಿಗೆ ಮುಂಬಯಿಗೆ ಹೋಗಿರುವುದು ಗೊತ್ತಾಗಿದೆ. ಪತ್ನಿ ಲಕ್ಷ್ಮೀಯ ಸಂಬಂಧಿಯೊಬ್ಬರ ಬಳಿ ಶೈಲೇಶ್‌ ಕುಮಾರ್‌ ಈ ಬಗ್ಗೆ ಕೇಳಿದಾಗ ಫೇಸ್‌ ಬುಕ್‌ ನಲ್ಲಿ ಲಕ್ಷ್ಮೀ ಸಜಾವುಲ್ಲಾಯೊಂದಿಗೆ ಚಾಟ್‌ ಮಾಡುತ್ತಿದ್ದಳು. ಕೆಲವೊಮ್ಮೆ ಫೋನ್‌ ನಲ್ಲೂ ಮಾತನಾಡುತ್ತಿದ್ದಳು ಎಂದು ಹೇಳಿದ್ದಾಳೆ.

ಮುಂಬಯಿಗೆ ತೆರಳಿದ ಬಳಿಕ ಲಕ್ಷ್ಮೀಯ ಹೆಸರನ್ನು ʼಮುಸ್ಕಾನ್‌ʼ ಎಂದು ಮಾಡಿ ಆಕೆಯನ್ನು ಮತಾಂತರ ಮಾಡಲಾಗಿದೆ. ಆ ಬಳಿಕ ಆಕೆಯೊಂದಿಗೆ ಸಜಾವುಲ್ಲಾ ವಿವಾಹವಾಗಿದ್ದಾನೆ. ಲಕ್ಷ್ಮೀಯ ಕುಟುಂಬಸ್ಥರು ಮುಂಬಯಿಗೆ ತೆರಳಿ ಮಾತುಕತೆ ನಡೆಸಿ, ಲಕ್ಷ್ಮೀಯನ್ನು ಮತ್ತೆ ಮನೆಗೆ ಕರೆ ತಂದಿದ್ದಾರೆ.

ಮುಂಬೈಗೆ ಕರೆದೊಯ್ಯುವ ಮೊದಲು ಲಕ್ಷ್ಮಿ ನಾಸಿಕ್‌ನಿಂದ ಕಲ್ಯಾಣ್‌ನಲ್ಲಿ ವಾಸಿಸುವ ತನ್ನ ಚಿಕ್ಕಪ್ಪನನ್ನು ಸಂಪರ್ಕಿಸಿದ್ದಳು. ತನ್ನನ್ನು ಬಲವಂತವಾಗಿ ಮುಂಬೈಗೆ ಕರೆದೊಯ್ದು ಬಿಡಲು ಬಯಸಿರುವುದಾಗಿ ಲಕ್ಷ್ಮಿ ತನ್ನ ಚಿಕ್ಕಪ್ಪನಿಗೆ ತಿಳಿಸಿದ್ದಾಳೆ. ಬಳಿಕ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು  ʼಆಜ್‌ ತಕ್‌ʼಗೆ ಶೈಲೇಶ್ ಹೇಳಿದ್ದಾರೆ.

Advertisement

ಐಪಿಸಿಯ ಸೆಕ್ಷನ್ 504 ಮತ್ತು 506, ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿ ಸಜಾವುಲ್ಲಾ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಸಿದ್ಧಾರ್ಥನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next