Advertisement

UP social media policy: ದೇಶ ವಿರೋಧಿ ಪೋಸ್ಟ್ ಗಳಿಗೆ ಜೀವಾವಧಿ ಶಿಕ್ಷೆ

03:53 PM Aug 28, 2024 | Team Udayavani |

ಲಕ್ನೋ: ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಪ್ರಚೋದನಕಾರಿ ವಿಷಯಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ನೂತನ ಸಾಮಾಜಿಕ ಮಾಧ್ಯಮ ನೀತಿಗೆ(new social media policy) ಉತ್ತರ ಪ್ರದೇಶ ಕ್ಯಾಬಿನೆಟ್ ಮಂಗಳವಾರ ಅನುಮೋದನೆ ನೀಡಿದೆ.

Advertisement

ನೀತಿಯು ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮದ ವಿಷಯವನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಪರಿಚಯಿಸಲಿದ್ದು, ಕಾನೂನು ಕ್ರಮವನ್ನು ಕಡ್ಡಾಯಗೊಳಿಸಲಿದೆ. ಹೊಸ ನೀತಿಯ ಪ್ರಕಾರ, ರಾಷ್ಟ್ರವಿರೋಧಿ ವಿಷಯವನ್ನು ಪೋಸ್ಟ್ ಮಾಡುವುದು ಗಂಭೀರವಾದ ಅಪರಾಧವಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿಯವರೆಗೆ ಶಿಕ್ಷೆಯನ್ನು ಹೊಂದಿರುತ್ತದೆ.

ಈ ಹಿಂದೆ, ಇಂತಹ ಕ್ರಮಗಳನ್ನು ಮಾಹಿತಿ ತಂತ್ರಜ್ಞಾನ (IT) ಕಾಯಿದೆಯ ಸೆಕ್ಷನ್ 66E ಮತ್ತು 66F ಅಡಿಯಲ್ಲಿ ಕ್ರಮವಾಗಿ ಗೌಪ್ಯತೆ ಉಲ್ಲಂಘನೆ ಮತ್ತು ಸೈಬರ್‌ಟೆರರಿಸಂಗೆ ಸಂಬಂಧಿಸಿದಂತೆ ಕಾನೂನು ಮಾಡಲಾಗಿತ್ತು.

ಅಧಿಕೃತ ಹೇಳಿಕೆಯ ಪ್ರಕಾರ ಆನ್‌ಲೈನ್‌ನಲ್ಲಿ ಅಶ್ಲೀಲ ಅಥವಾ ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡುವುದು ಕ್ರಿಮಿನಲ್ ಮಾನನಷ್ಟ ಆರೋಪಗಳಿಗೆ ಕಾರಣವಾಗಬಹುದು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಳ್ಳುವ ಕಾನೂನುಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next