Advertisement

ಖಾಸಗಿ ಶಾಲೆಗಳಿಗೆ ಕಡಿವಾಣ

07:00 AM Apr 05, 2018 | Team Udayavani |

ಲಕ್ನೋ: ಖಾಸಗಿ ಶಾಲೆಗಳು ಶುಲ್ಕಗಳ ಹೆಸರಿನಲ್ಲಿ ಮಕ್ಕಳ ಹೆತ್ತವರನ್ನು ಸುಲಿಗೆ ಮಾಡುವ ಕೆಟ್ಟ ಸಂಸ್ಕೃತಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಉತ್ತರ ಪ್ರದೇಶ ಸರಕಾರ, ಸದ್ಯದಲ್ಲೇ ಖಾಸಗಿ ಶಾಲೆಗಳ ಶುಲ್ಕವನ್ನು ಸರಕಾರವೇ ನಿಗದಿಗೊಳಿಸುವ ಸುಗ್ರೀವಾಜ್ಞೆ  ಹೊರಡಿಸಲು ತೀರ್ಮಾನಿಸಿದೆ. “ಸ್ವವಿತಾ ಪೋಷಿತ್‌ ಸ್ವತಂತ್ರ ವಿದ್ಯಾಲಯ (ಶುಲ್ಕ ನಿರ್ಧರಣ್‌) ಅಧ್ಯಾದೇಶ್‌-2018′ ಎಂಬ ಹೆಸರಿನ ಈ ಸುಗ್ರೀವಾಜ್ಞೆಗೆ  ರಾಜ್ಯಪಾಲರ ಅನುಮತಿ ಸಿಕ್ಕರೆ, ಆ ರಾಜ್ಯದಲ್ಲಿ ವಿದ್ಯಾರ್ಥಿ ಗಳಿಂದ ವರ್ಷಕ್ಕೆ ಕನಿಷ್ಟ 20 ಸಾವಿರ ರೂ.ಗಳಷ್ಟು ಶುಲ್ಕವನ್ನು ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಬೀಳಲಿದೆ. 

Advertisement

ರಾಜ್ಯದ ಪ್ರತಿ ವಲಯದಲ್ಲಿಯೂ ಶುಲ್ಕ ನಿಯಂತ್ರಣ ಸಮಿತಿಗಳು ಅಸ್ತಿತ್ವಕ್ಕೆ ಬರಲಿದ್ದು, ಆ ಸಮಿತಿಗಳು 1ನೇ ತರಗತಿಯಿಂದ ಪ್ರೌಢ ಶಾಲೆಗಳವರೆಗಿನ ಶಿಕ್ಷಣ ನೀಡುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಶುಲ್ಕಗಳನ್ನು ನಿರ್ಧರಿಸುತ್ತವೆ. ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳು ಮಾತ್ರವಲ್ಲ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳೂ ಈ ಸಮಿತಿಗಳ ವ್ಯಾಪ್ತಿಯೊಳಗೆ ಬರಲಿವೆ. ಈ ಸಮಿತಿಯಲ್ಲಿ ಶಿಕ್ಷಣ ತಜ್ಞರು ಸೇರಿದಂತೆ, ವಿದ್ಯಾರ್ಥಿಗಳ ಪೋಷಕರ ವಲಯದ ಪ್ರತಿನಿಧಿಗಳೂ ಸದಸ್ಯರಾಗಿ ಇರಲಿದ್ದಾರೆ. ಈ ಪ್ರಾದೇಶಿಕ ಸಮಿತಿಗಳಿಗೆ ಎಲ್ಲಾ ಖಾಸಗಿ ಶಾಲೆಗಳೂ ತಮ್ಮ ವಾರ್ಷಿಕ ಆದಾಯದ ವರದಿಯನ್ನು ಸಲ್ಲಿಸಬೇಕಿರುತ್ತದೆ. ವರದಿ ಸಲ್ಲಿಸುವಲ್ಲಿ ಮೊದಲ ಬಾರಿ ವಿಫ‌ಲವಾದರೆ, 1 ಲಕ್ಷ ರೂ., ಪುನಃ ಪುನಃ ವಿಫ‌ಲವಾದರೆ ಅಂಥ ಪ್ರತಿ ಸಂದರ್ಭ ದಲ್ಲಿಯೂ 5 ಲಕ್ಷ ರೂ. ದಂಡ ವಿಧಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next