ಲಕ್ನೋ: ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ಬಂದು ನಾಶ ಮಾಡುತ್ತವೆ. ಕಾಡಾನೆ, ಮಂಗಗಳು ಬಂದು ಬೆಳೆಗಳನ್ನು ತಿಂದು ತೇಗುತ್ತವೆ. ಇದನ್ನು ರೈತರು ತಡೆಯಲು ಯತ್ನಿಸಿದರೂ ಅಷ್ಟು ಸುಲಭವಾಗಿ ಅದರಲ್ಲಿ ಯಶಸ್ಸು ಸಾಧಿಸುವುದಿಲ್ಲ.
ಮಂಗಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಲಖಿಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಮಾಡಿರುವ ದೇಸಿ ಉಪಾಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾವು ಕಷ್ಟಪಟ್ಟು ಬೆಳೆಯನ್ನು ಬೆಳೆದಿದ್ದೇವೆ. ನಮ್ಮ ತೋಟಕ್ಕೆ 40-45 ಮಂಗಗಳು ಬಂದು ಬೆಳೆಯನ್ನು ನಾಶ ಮಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಗಮನಹರಿಸಿಲ್ಲ. ಹಾಗಾಗಿ ನಾವು ಎಲ್ಲರೂ ಸೇರಿ 4,000 ರೂ. ಖರ್ಚು ಮಾಡಿ ಕರಡಿಯ ವೇಷಭೂಷಣವನ್ನು ಖರೀದಿಸಿದ್ದೇವೆ ಎಂದು ರೈತ ಗಜೇಂದ್ರ ಸಿಂಗ್ ಎಎನ್ ಐಗೆ ಹೇಳಿದ್ದಾರೆ.
ಇದನ್ನೂ ಓದಿ: Salman Khan ಹತ್ಯೆ ಖಚಿತ…: ಮತ್ತೆ ಎಚ್ಚರಿಸಿದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರರ್
ಕರಡಿಯ ವೇಷಭೂಷಣವನ್ನು ತೊಟ್ಟು ತೋಟದ ಮಧ್ಯ ಕೂತು ಮಂಗಗಳನ್ನು ಬೆದರಿಸುವ ರೈತರ ಉಪಾಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಳೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಮಂಗಗಳು ಬೆಳೆಗಳಿಗೆ ಹಾನಿ ಮಾಡುವುದನ್ನು ತಡೆಯಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಾನು ರೈತರಿಗೆ ಭರವಸೆ ನೀಡುತ್ತೇನೆ ಎಂದು ಲಖಿಂಪುರ ಖೇರಿ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಸಂಜಯ್ ಬಿಸ್ವಾಲ್ ಹೇಳಿದ್ದಾರೆ.