ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುಂತಹ ವಿಡಿಯೋಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಪೊಲೀಸ್ ಸಿಬ್ಬಂದಿಯೊಬ್ಬರು ಗೂಗಲ್ ಸಿಇಒ ಸುಂದರ್ ಪಿಚ್ಚೈ ಹಾಗೂ ಇತರ 17 ಮಂದಿ ವಿರುದ್ಧ ದೂರು ದಾಖಲಿಸಿದ್ದು, ನಂತರ ಎಫ್ ಐಆರ್ ನಿಂದ ಪಿಚ್ಚೈ ಅವರ ಹೆಸರನ್ನು ಕೈಬಿಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ(ಫೆ.12,2021) ತಿಳಿಸಿದ್ದಾರೆ.
ಇದನ್ನೂ ಓದಿ:ಕೃಷಿಹೊಂಡದ ನೀರಿನಲ್ಲಿ ಮುಳುಗಿ ನಾಲ್ಕು ವರ್ಷ ಪ್ರಾಯದ ಇಬ್ಬರು ಮಕ್ಕಳ ಸಾವು
ಈ ಪ್ರಕರಣದಲ್ಲಿ ಇವರ ಶಾಮೀಲು ಇಲ್ಲ ಎಂದು ಪತ್ತೆಯಾದ ನಂತರ ಸುಂದರ್ ಪಿಚ್ಚೈ ಮತ್ತು ಇತರ ಮೂವರು ಅಧಿಕಾರಿಗಳ ಹೆಸರನ್ನು ಎಫ್ ಐಆರ್ ನಿಂದ ತೆಗೆದುಹಾಕಲಾಗಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ದೂರವಾಣಿ ಮೂಲಕ ಪಿಟಿಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಗಾಜಿಯಾಪುರ್ ಜಿಲ್ಲೆಯ ಸ್ಥಳೀಯ ರೆಕಾರ್ಡಿಂಗ್ ರೂಂನಲ್ಲಿ ಈ ವಿಡಿಯೋವನ್ನು ತಯಾರಿಸಿದ್ದು, ಇದು ವಾಟ್ಸಪ್ ನಲ್ಲಿ ಹರಿದಾಡಿದ ನಂತರ ಯೂಟ್ಯೂಬ್ ನಲ್ಲಿ ಅಪ್ ಮಾಡಿದ್ದು 5 ಲಕ್ಷಕ್ಕೂ ಅಧಿಕ ವೀವ್ಸ್ ಆಗಿತ್ತು. ಬಳಿಕ ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಸ್ಥಳೀಯ ವ್ಯಕ್ತಿಗೆ 8,500ಕ್ಕೂ ಅಧಿಕ ಬೆದರಿಕೆ ಕರೆಗಳು ಬಂದಿದ್ದು, ಬಳಿ ಈ ವ್ಯಕ್ತಿ ದೂರು ದಾಖಲಿಸಿದ್ದು, ಅದರಂತೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.
ಉತ್ತರಪ್ರದೇಶದ ಭೇಲುಪುರ್ ಪೊಲೀಸ್ ಠಾಣೆಯಲ್ಲಿ ಫೆಬ್ರುವರಿ 6ರಂದು ಗೂಗಲ್ ನ ಸುಂದರ್ ಪಿಚ್ಚೈ, ಸಂಜಯ್ ಕುಮಾರ್ ಗುಪ್ತಾ ಸೇರಿದಂತೆ 18 ಮಂದಿ ಹೆಸರನ್ನು ಎಫ್ ಐಆರ್ ನಲ್ಲಿ ಉಲ್ಲೇಖಸಿದ್ದರು. ಈ ಬಗ್ಗೆ ಗೂಗಲ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ.