Advertisement

UP By-Election 2024;ಬಿಜೆಪಿಗಿಂತ ಮುನ್ನವೇ ಸಿಎಂ ಯೋಗಿ ಸಿದ್ಧತೆ ಆರಂಭ!

12:10 AM Jul 26, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಭಾರೀ ಹಿನ್ನಡೆ ಕಂಡ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದವು. ಇದರ ನಡುವೆಯೇ, ಮುಂಬರುವ 10 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಸಿಎಂ ಯೋಗಿ ಸಿದ್ಧತೆಯನ್ನು ಆರಂಭಿಸಿ ದ್ದಾರೆ. ಪಕ್ಷವು ತನ್ನ ಕೆಲಸವನ್ನು ಶುರು ಮಾಡುವ ಮೊದಲೇ ಸಿಎಂ ಯೋಗಿ ಅಖಾಡಕ್ಕಿಳಿದಿರುವ ಹಲವರಿಗೆ ಆಶ್ಚರ್ಯ ತಂದಿದೆ.

Advertisement

ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳ ಮೇಲುಸ್ತುವಾರಿಗೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಸಚಿವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದಾರೆ. ಈ ಕುರಿತು 16 ಸಚಿವರ ಸಭೆ ನಡೆಸಿರುವ ಯೋಗಿ, ಎಲ್ಲ ಉಪಚುನಾವಣೆ ನಡೆಯಲಿರುವ ಎಲ್ಲ ಹತ್ತೂ ಕ್ಷೇತ್ರಗಳನ್ನು ಗೆಲ್ಲುವ ಜವಾಬ್ದಾರಿ ನೀಡಿದ್ದಾರೆ. ಮತ್ತೂಂದು ಮೂಲಗಳ ಪ್ರಕಾರ, ಯೋಗಿ ಅವರು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಚೌಧರಿಯೊಂದಿಗೆ ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಉ.ಪ್ರ.ಸಿಎಂ ಸ್ಥಾನದಿಂದ ಯೋಗಿ ಆದಿತ್ಯನಾಥ್‌ ಬದಲಾವಣೆ ಮಾಡಲಾಗುತ್ತದೆ ಎಂಬ ವರದಿಗಳ ನಡುವೆ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next