ಲಕ್ನೋ : ಉತ್ತರ ಪ್ರದೇಶದ ವಿಧಾನ ಸಭೆಗೆ ಇನ್ನೇನು ಕೆಲ ತಿಂಗಳುಗಳು ಬಾಕಿ ಇರವಾಗಲೇ ಆಡಳಿತರೂಢ ಪಕ್ಷ ಬಿಜೆಪಿ ಚಜುನಾವಣಾ ಪ್ರಚಾರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಚುನಾವಣೆಯ ಸಿದ್ಧತೆಯ ಹಿನ್ನೆಲೆಯಲ್ಲಿ ಕೆಲವು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಗೆ ಮಾಡಿಕೊಳ್ಳುತ್ತಿದ್ದರೇ, ಇತ್ತ ಬಿಜೆಪಿ ತನ್ನದೇ ಆದ ಕಾರ್ಯ ತಂತ್ರವನ್ನು ಹೂಡುತ್ತಿದೆ. ಈ ಬಾರಿಯೂ ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕು ಎಂಬ ಉದ್ದೇಶದಿಂದ ನಾಳೆ(ಸೋಮವಾರ, ಆಗಸ್ಟ್ 9) ಯಿಂದ ಚುನಾವಣಾ ಮತ ಪ್ರಚಾರ ಸೇರಿದಂತೆ 100 ಕ್ಕೂ ಅಧಿಕ ಪ್ರಚಾರ ಸಭಾ ಕಾರ್ಯಕ್ರಮಗಳ ರೂಪುರೇಷೆಗಳನ್ನು ಮಾಡಿಕೊಂಡಿದೆ.
ಇದನ್ನೂ ಓದಿ : ಮುಗಿಯದ ಖಾತೆ ಕ್ಯಾತೆ: ಸಿಎಂ ಬೊಮ್ಮಾಯಿ ಮನೆಗೆ ಕುಟುಂಬ ಸಮೇತ ಆಗಮಿಸಿದ ಆನಂದ್ ಸಿಂಗ್
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಸುನಿಲ್ ಬನ್ಸಾಲ್, ನಾಳೆಯಿಂದ ಜಿಲ್ಲಾ ಪಂಚಾಯತ್ ಹಾಗೂ ಬ್ಲಾಕ್ ಮಟ್ಟದಲ್ಲಿ ಆರಂಭವಾಗುವ ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಬರುವ ಜನವರಿ 26 ರ ತನಕ ನಡೆಯಲಿದೆ ಎಂದು ನಡೆಯಲಿದೆ ಎಂದಿದ್ದಾರೆ.
ಈ ಬಾರಿಯೂ ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಬೆಂಬಲಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಪಕ್ಷದ ಕಾರ್ಯಕರ್ತರೆಲ್ಲರೂ ಪಕ್ಷಕ್ಕಾಗಿ ಕಾರ್ಯ ನಿರತರಾಗಿದ್ದಾರೆ. ಜನಪರ ಹಾಗೂ ಅಭಿವೃದ್ಧಿ ಪರ ಸರ್ಕಾರಕ್ಕೆ ಎಂದಿಗೂ ಜನ ಬೆಂಬಲ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ದೇಶದಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಉತ್ತರ ಪ್ರದೇಶದ ಅಭಿವೃದ್ಧಿ ಮಾಡುವಲ್ಲಿಯೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕೆಲಸ ಮಾಡಿದೆ. ಮುಂದೆಯೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡುತ್ತದೆ ಎಂದು ಅವರು ಭರವಸೆ ಮಾತನಾಡಿದ್ದಾರೆ.
ಆಗಸ್ಟ್ 10 ರಿಂದ ಆಗಸ್ಟ್ 20 ತನಕ ರಾಜ್ಯದ 403 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಕಾರ್ಯಕಾರಿ ಸಭೆಗಳು ನಡೆಯುತ್ತದೆ. ಬೂತ್ ವಿಜಯ್ ಅಭಿಯಾನ ಅಡಿಯಲ್ಲಿ ಬೂತ್ ಸಮಿತಿಗಳ ಸಭೆ ಅಗಸ್ಟ್ 23 ರಿಂದ ಸಪ್ಟೆಂಬರ್ 7 ರ ತನಕ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಂದಾಜು 100 ರಿಂದ 120 ಸಭಾ ಕಾರ್ಯಕ್ರಮಗಳು ಪಕ್ಷದ ಮಟ್ಟದಲ್ಲಿ ಹಾಗೂ ಸಾರ್ವಜನಿಕ ಮಟ್ಟದಲ್ಲಿ ಜನವರಿ 26, 2022 ರ ತನಕ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಮತ್ತೆ ಗೆಲುವಿನ ಹಳಿಯೇರಿದ ಆಸೀಸ್: ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾಗೆ ಸೋಲು