ಲಕ್ನೋ: ಸಿನಿಮಾ ನೋಡಲು ಥಿಯೇಟರ್ಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿನ ಸಿನಿಮಾ ಹಾಲ್ ವೊಂದರಲ್ಲಿ ಇತ್ತೀಚೆಗೆ ನಡೆದಿದೆ.
ಮೃತ ವ್ಯಕ್ತಿಯನ್ನು ದ್ವಾರಕಾಪುರಿ ನಿವಾಸಿ ಅಷ್ಟಕ್ ತಿವಾರಿ ಎಂದು ಗುರುತಿಸಲಾಗಿದೆ.
ಅಷ್ಟಕ್ ಶನಿವಾರ ಸಂಜೆ 7:50 ರ ಹೊತ್ತಿಗೆ (ಆ.26 ರಂದು) ಇತ್ತೀಚೆಗೆ ತೆರೆ ಕಂಡಿರುವ ʼಗದರ್-2ʼ ಸಿನಿಮಾವನ್ನು ನೋಡಲು ಲಖಿಂಪುರ ಖೇರಿಯಲ್ಲಿನ ಫನ್ ಸಿನಿಮಾ ಹಾಲ್ ಗೆ ತೆರಳಿದ್ದಾರೆ. ಥಿಯೇಟರ್ ಒಳಗೆ ಬರುತ್ತಿದ್ದಾಗ ಫೋನಿನಲ್ಲಿ ಮಾತನಾಡುತ್ತಾ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೆಟ್ಟಲು ಹತ್ತಿ ಥಿಯೇಟರ್ ಒಳಗೆ ಪ್ರವೇಶಿಸಬೇಕೆನ್ನುವಾಗಲೇ ಅಷ್ಟಕ್ ತಿವಾರಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ಮುಂದೆ ನಡೆದುಕೊಂಡು ಹೋಗುತ್ತಿದ್ದವರು ಅವರ ನೆರವಿಗೆ ಧಾವಿಸಿದ್ದಾರೆ. ಕೂಡಲೇ ತಿವಾರಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಈ ವೇಳೆ ಅವರು ಆದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ತಿವಾರಿ ಅವರ ಫೋನ್ ಅನ್ಲಾಕ್ ಮಾಡಿ, ಅಲ್ಲಿದ್ದ ಗಾರ್ಡ್ಗಳು ಮತ್ತು ಬೌನ್ಸರ್ಗಳು ಅವರ ಕುಟುಂಬವನ್ನು ಸಂಪರ್ಕಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ನೈಪಾಲ್ ಸಿಂಗ್ ಹೇಳಿದ್ದಾರೆ.