Advertisement
ಉತ್ತರಪ್ರದೇಶ 2ನೇ ಹಂತದ ಚುನಾವಣೆಯಲ್ಲಿ ಒಟ್ಟು 2.28 ಕೋಟಿ ಮತದಾರರಿದ್ದಾರೆ. ಇದರಲ್ಲಿ 1.04 ಮಹಿಳೆಯರಿದ್ದಾರೆ. ಕಳೆದ ವರ್ಷ ಇಲ್ಲಿನ 67 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ 34, ಬಿಎಸ್ಪಿ 18, ಬಿಜೆಪಿ 10, ಕಾಂಗ್ರೆಸ್ 3, ಇತರರು ಎರಡು ಸ್ಥಾನಗಳ ಗೆದ್ದಿದ್ದವು. ಈ ಬಾರಿ ಬಿಜೆಪಿ ಪ್ರಬಲವಾಗಿರುವುದರಿಂದ ಈ 67 ಸ್ಥಾನಗಳ ಫಲಿತಾಂಶ ಬಹಳ ಮಹತ್ವ ಪಡೆದುಕೊಂಡಿದೆ.
ಉತ್ತರಾಖಂಡದ 1 ಸ್ಥಾನದ ಚುನಾವಣೆ ಬಾಕಿ: ಉತ್ತರಪ್ರದೇಶದ ನೆರೆರಾಜ್ಯವಾದ ಉತ್ತರಾಖಂಡದಲ್ಲಿನ 70 ಸ್ಥಾನಗಳ ಪೈಕಿ ಬುಧವಾರ 69 ಸ್ಥಾನಕ್ಕೆ ಮಾತ್ರ ಮತದಾನ ನಡೆಯಿತು. ಚಮೋಲಿ ಜಿಲ್ಲೆಯ ಕರ್ಣಪ್ರಯಾಗ ಕ್ಷೇತ್ರದ ಮತದಾನ ಮಾ.9ಕ್ಕೆ ಮರು ನಿಗದಿಯಾಗಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಿದ್ದ ಬಿಎಸ್ಪಿ ನಾಯಕ ಕುಲದೀಪ್ ಸಿಂಗ್ ಕನ್ವಾಸಿ ಮೊನ್ನೆ ಭಾನುವಾರ ಮೃತಪಟ್ಟಿರುವುದರಿಂದ ಈ ಬದಲಾವಣೆ ಮಾಡಿಕೊಳ್ಳಲಾಗಿದೆ.