Advertisement
ರಾಜ್ಯ ಚುನಾವಣ ಆಯೋಗವು ತೆರವಾದ ಸ್ಥಾನಗಳ ಉಪಚುನಾವಣೆಯ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದ್ದು ನವೆಂಬರ್ 4ಕ್ಕೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಿಸಲಿದ್ದಾರೆ. ನ. 11 ನಾಮಪತ್ರ ಸಲ್ಲಿಸಲು ಕೊನೆಯ ದಿನ, ನ. 12 ನಾಮಪತ್ರಗಳ ಪರಿಶೀಲನೆ, ನ. 14 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರಲಿದೆ.
Related Articles
ಸ್ಥಾನಗಳಿಗೂ ಚುನಾವಣೆ
ಬೆಂಗಳೂರು: ರಾಜ್ಯದ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಹಲವು ಕಾರಣಗಳಿಂದ ತೆರವಾಗಿರುವ ಹಾಗೂ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ನವೆಂಬರ್ 23ರಂದು ಉಪಚುನಾವಣೆ ಘೋಷಣೆಯಾಗಿದೆ.
Advertisement
ಅದರಂತೆ 31 ಜಿಲ್ಲೆಗಳ 195 ತಾಲೂಕುಗಳಲ್ಲಿರುವ 531 ಗ್ರಾ.ಪಂ.ಗಳಲ್ಲಿ ಒಟ್ಟು 641 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.ದಕ್ಷಿಣ ಕನ್ನಡದ 30, ಉಡುಪಿಯ 10, ಕೊಡಗು 10, ಬೆಂಗಳೂರು ನಗರ ಜಿಲ್ಲೆಯ 13, ರಾಮನಗರ ಜಿಲ್ಲೆಯ 21, ಚಿಕ್ಕಬಳ್ಳಾಪುರ ಜಿಲ್ಲೆಯ 10, ಕೋಲಾರದ 16, ತುಮಕೂರಿನ 30, ಚಿತ್ರದುರ್ಗದಲ್ಲಿ 28, ದಾವಣಗೆರೆಯ 53, ಶಿವ ಮೊಗ್ಗ 19, ಮೈಸೂರು ಜಿಲ್ಲೆಯ 21, ಚಾಮರಾಜನಗರದ 11, ಹಾಸನದ 22, ಮಂಡ್ಯದ 31, ಚಿಕ್ಕಮಗಳೂರಿನ 16, ಬೆಳಗಾವಿಯ 43, ಬಾಗಲಕೋಟೆಯ 27, ಧಾರವಾಡದ 17, ವಿಜ ಯಪುರದ 15, ಗದಗದ 7, ಹಾವೇರಿಯ 17, ಉತ್ತರ ಕನ್ನಡದ 13, ಕಲಬುರಗಿಯ 30, ಬೀದ ರ್‌ನ 30, ವಿಜಯನಗರ 17, ರಾಯಚೂರು 30, ಕೊಪ್ಪಳ 19, ಯಾದಗಿರಿ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.