Advertisement
ನಗರದ ಡಾ.ಎಸ್.ಎಂ ಪಂಡಿತ ರಂಗ ಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ನಿಗದಿಯಾದ ಕಾರ್ಯಕ್ರಮಕ್ಕೆ ಒಂದುವರೆ ಗಂಟೆ ವಿಳಂಬವಾಗಿ ಆಗಮಿಸಿದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿದ್ದಕ್ಕೆ ಆಕ್ರೋಶಿತ ಬಸವ ಭಕ್ತರು ಕನಿಷ್ಠ ಸೌಜನ್ಯ, ಸಮಯಪ್ರಜ್ಞೆ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
Related Articles
Advertisement
ನಿಗದಿತ ಸಮಯಕ್ಕೆ ಬ್ಯಾನರ್ ಸುಮಾರು ಎರಡು ಗಂಟೆ ನಂತರ ಕಾರ್ಯಕ್ರಮ ಆರಂಭವಾಗಿ, ನಂತರ ಭಾವಚಿತ್ರ ಅನಾವರಣ ಗೊಳಿಸಲಾಯಿತು.
ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆತಂದಿದ್ದು, ಅವರಿಗೆ ಕುಡಿಯಲು ನೀರು ಸಹ ವ್ಯವಸ್ಥೆ ಮಾಡಿರಲಿಲ್ಲ. ಮಕ್ಕಳ ಪರದಾಟ ಕಂಡು ಗಂಟೆ ನಂತರ ನೀರು ನೀಡಲಾಯಿತು. ಬೃಹತ್ ಸಮಾರಂಭದಲ್ಲಿ ಎರಡು ಸಣ್ಣ ಸೌಂಡ್ ಬಾಕ್ಸ್ ಗಳನ್ನು ಅಳವಡಿಸಿದ್ದು, ಕಂಡು ಬಂತು.
ವಿಶೇಷ ಉಪನ್ಯಾಸ ನೀಡದ ಮೀನಾಕ್ಷಿ ಬಾಳಿ ಅವರು, ಜಿಲ್ಲಾಡಳಿತದ ಅಚಾತುರ್ಯದಿಂದ ಕಾರ್ಯಕ್ರಮ ದಲ್ಲಿ ಎಡವಟ್ಟಾಗಿದೆ. ಯಾವುದನ್ನು ಕಾಟಾಚಾರಕ್ಕೆ ಮಾಡಬೇಡಿ. ಮುಂದೆ ಹೀಗಾಗದಂತೆ ಜಿಲ್ಲಾಡಳಿತ ಎಚ್ಚರ ವಹಿಸಲಿ ಎಂದು ಅಸಮಾಧಾನ ಹೊರ ಹಾಕಿದರು. ಒಟ್ಟಾರೆ ಜಿಲ್ಲಾಡಳಿತ ಕಾರ್ಯಕ್ರಮ ಕ್ಕೆ ಯಾವುದೇ ಸಿದ್ದತೆ ಮಾಡಿಕೊಳ್ಳದಿರುವುದು ಕಂಡು ಬಂತು.