ಚಾಮರಾಜನಗರ: ಸಮಾಜದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಅಸ್ಥಿತ್ವದಲ್ಲಿ ಇರುವವರೆಗು ಜಾತಿ ವ್ಯವಸ್ಥೆ ಜೀವಂತವಾಗಿರುತ್ತದೆ ಎಂದು ಬಿಎಸ್‌ಪಿ ನಾಯಕ, ಸಚಿವ ಎನ್.ಮಹೇಶ್ ಕಿಡಿ ಕಾರಿದ್ದಾರೆ.
ಬಿಎಸ್‌ಪಿ ಪಕ್ಷ ಬುಧವಾರ ಆಯೋಜಿಸಿದ್ದ ಪಾರ್ಲಿಮೆಂಟ್ ಕಡಗೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದರು. ಕಾಂಗ್ರೆಸ್ ಪಕ್ಷ ಸುದೀರ್ಘ ದೇಶವನ್ನಾಳಿದರೂ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ತರುವಲ್ಲಿ ವಿಫಲವಾಗಿದೆ ಎಂದರು.
70 ವರ್ಷಗಳ ಸಂಘಪರಿವಾರದ ಚಳುವಳಿಯ ಬಳಿಕ ಈಗ ಬಿಜೆಪಿ ಸೃಷ್ಟಿಯಾಗಿದೆ.ಅದೂ ಸಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಯಾವುದೇ ಕೊಡುಗೆ ನೀಡಿಲ್ಲ ಎಂದರು.
ಬಿಎಸ್‌ಪಿ ಕೇವಲ ದಲಿತರ ಪಕ್ಷ ಅಲ್ಲ. ಅದು ಎಲ್ಲಾ ವರ್ಗದವರ ಪಕ್ಷ ಎಂದು ಇದೇ ವೇಳೆ ಮಹೇಶ್ ಹೇಳಿದರು.
ನಮ್ಮ ಹೋರಾಟ ಪಾರ್ಲಿಮೆಂಟ್ ಕಡೆಗೆ. ಮೈತ್ರಿ ಎನ್ನುವುದು ವಿಧಾನಸಭೆಗೆ ಸೀಮಿತ. ಲೋಕಸಭಾ ಚುನಾವಣೆಗೆ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಎಂದರು.