Advertisement
ಸಾಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಲು ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಕೆಲಸ ಮಾಡುತ್ತ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ರಾಜಕೀಯ ದೊಂಬರಾಟ ನಡೆಸುತ್ತಿದೆ. ಸಿದ್ದರಾಮಯ್ಯರನ್ನು ಇಳಿಸಲು ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಪ್ರಯತ್ನಿಸುತ್ತಿದೆ. ಆದರೆ ಮುಖ್ಯಮಂತ್ರಿಯವರು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಈಗಾಗಲೇ ಇಡಿಯನ್ನು ಮುಂದೆ ಬಿಟ್ಟು ಬಿಜೆಪಿ ಚುನಾವಣಾ ಬಾಂಡ್ ಸುಮಾರು 8 ಸಾವಿರ ಕೋಟಿ ರೂ. ಸಂಗ್ರಹಿಸಿದೆ. ಐಟಿ ಮತ್ತು ಇಡಿ ಮೂಲಕ ದೊಡ್ಡ ಉದ್ಯಮಿಗಳನ್ನು ಹೆದರಿಸಿ ಬಿಜೆಪಿ ಈ ಹಣ ಸಂಗ್ರಹಿಸಿದೆ. ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ರಾಜ್ಯಪಾಲರು ಮುಡಾ ಪ್ರಕರಣ ತನಿಖೆಗೆ ಆದೇಶ ನೀಡಿದ್ದಾರೆ. ಮುಖ್ಯಮಂತ್ರಿಗಳ ಪತ್ನಿ ನಿವೇಶನ ವಾಪಸ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮಶೇಖರ ಲ್ಯಾವಿಗೆರೆ, ಕೆ.ಸಿದ್ದಪ್ಪ, ಕಲಸೆ ಚಂದ್ರಪ್ಪ, ಡಿ.ದಿನೇಶ್, ಹೊಳೆಯಪ್ಪ ಇನ್ನಿತರರಿದ್ದರು.