Advertisement

ಕುಕ್ಕುಂದೂರು: ನಕ್ರೆ ನಡುವೆ ಅಸಮರ್ಪಕ ಚರಂಡಿ ವ್ಯವಸ್ಥೆ

10:42 AM May 09, 2022 | Team Udayavani |

ಕಾರ್ಕಳ: ಕುಕ್ಕುಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವಜ್ಞ ವೃತ್ತದಿಂದ ಕವಲೊಡೆದು ನಕ್ರೆ ಕಡೆ ತೆರಳುವ ದಾರಿ ಮಧ್ಯೆ ಅಸಮರ್ಪಕ ಚರಂಡಿ ವ್ಯವಸ್ಥೆ ಯಿಂದ ಮಳೆ ಬರುವ ವೇಳೆ ರಸ್ತೆಯೇ ಚರಂಡಿಯಾಗಿ ಪರಿವರ್ತನೆಯಾಗುತ್ತಿದೆ. ಸಂಚಾರದಲ್ಲೂ ಸಮಸ್ಯೆಗಳಾಗುತ್ತಿವೆ.

Advertisement

ಅಯ್ಯಪ್ಪ ನಗರದಿಂದ ನಕ್ರೆ ಭಾಗಕ್ಕೆ ತೆರಳುವ ರಸ್ತೆಯ ಮಧ್ಯೆ ಅನ್ನಪೂರ್ಣ ಜನರಲ್‌ ಸ್ಟೋರ್‌ನ ಎದುರುಗಡೆ ಈ ಸಮಸ್ಯೆಯಿದೆ. ಮೇ 6ರಂದು ಸಂಜೆ ಸುರಿದ ವ್ಯಾಪಕ ಮಳೆಗೆ ಈ ಜಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣಕ್ಕೆ ಎತ್ತರದ ಪ್ರದೇಶದದಿಂದ ತಗ್ಗು ಪ್ರದೇಶಕ್ಕೆ ಮಳೆ ನೀರು ಹರಿದು ಬಂದು ರಸ್ತೆಯೇ ಹೊಳೆಯಂತಾಗಿತ್ತು. ಮಳೆ ನೀರಿನ ಜತೆ ಕಲ್ಲು ಮಣ್ಣು ಮಿಶ್ರಿತ ಕೆಸರು ನೀರು ರಸ್ತೆಗೆ ಹರಿದು ಬಂದಿತ್ತು. ಕಸ, ಕಡ್ಡಿ, ಕಲ್ಲುಗಳು ರಸ್ತೆಯ ಮಧ್ಯೆ ಸಂಗ್ರಹಗೊಂಡ ಕಾರಣದಿಂದ ಸಂಚಾರ ವೇಳೆ ಇಲ್ಲಿ ತೊಂದರೆಗಳಾಗುತ್ತಿವೆ ಎಂದು ವಾಹನ ಸವಾರರು ದೂರಿದ್ದಾರೆ. ದ್ವಿಚಕ್ರ ವಾಹನ ಸವಾರರು ತೆರಳುವಾಗ ಇಲ್ಲಿ ಬಿದ್ದು ಗಾಯಗೊಳ್ಳುವ ಸ್ಥಿತಿ ಕೂಡ ಇದೆ.

ಪ್ರತಿ ಮಳೆಗಾಲ ಕೂಡ ಇಲ್ಲಿ ಸಮಸ್ಯೆ ಪುನಾರವರ್ತನೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಇಲ್ಲಿ ಈ ಪರಿಸ್ಥಿತಿ ಎದುರಾಗುತ್ತದೆ ಎಂದು ಈ ಭಾಗದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲಕ್ಕೂ ಮುಂಚಿತ ಸೂಕ್ತ ಚರಂಡಿ ನಿರ್ಮಿಸಿ ನೀರು ರಸ್ತೆಗೆ ಬರದಂತೆ ತಡೆದು ಚರಂಡಿ ಮೂಲಕವೇ ಹರಿದು ಹೋಗಲು ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ಹೀಗೆ ಮಾಡಿದಾಗ ಡಾಮರು ರಸ್ತೆಯು ಉತ್ತಮವಾಗಿ ಬಹುಕಾಲ ಉಪಯೋಗಕ್ಕೆ ಬರಬಹುದು ಎನ್ನುವ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next